ವಿಷಯ : ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ
ಸಂಶೋಧಕ : ಡಾ.ಪ್ರಕಾಶ ಗ.ಖಾಡೆ
ಮಾರ್ಗದರ್ಶಕರು :ಪ್ರೋ. ಎ.ವಿ.ನಾವಡ
ಕನ್ನಡ ವಿಶ್ವವಿದ್ಯಾಲಯ ಹಂಪಿ,ಹಸ್ತಪ್ರತಿ ಶಾಸ್ತ್ರ ವಿಭಾಗ.
ವರ್ಷ : 2005
ಸಂಶೋಧನಾ ಪ್ರಬಂಧ ಪ್ರಕಟಣೆ :2007,
ಎರಡನೆಯ ಮುದ್ರಣ :2010
ಪ್ರತಿಗಳಿಗಾಗಿ : ಡಾ.ಪ್ರಕಾಶ ಗ.ಖಾಡೆ,
ನಿರ್ದೇಶಕರು,ಸಾಹಿತ್ಯ ಸಂಶೋಧನಾ ಅಧ್ಯಯನ ಕೇಂದ್ರ,
ನವನಗರ,ಬಾಗಲಕೋಟ.
ಮೊ.9845500890
“ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಕುರಿತು ಕೈಕೊಳ್ಳಲಾದ ಪಿಎಚ್.ಡಿ. ಪದವಿ ಅಧ್ಯಯನದ ಸಂಕ್ಷಿಪ್ತ ಸಾರಲೇಖ ಈ ರೀತಿಯದಾಗಿದೆ.
ಅಧ್ಯಾಯ 1. ಅಧ್ಯಯನದ ಉದ್ದೇಶ, ಸ್ವರೂಪ ಮತ್ತು ವ್ಯಾಪ್ತಿ : 'ನವೋದಯ' ಕನ್ನಡ ಭಾಷಾ ಸಮುದಾಯದ ಹೊಸ ಸ್ವರೂಪ ದರ್ಶನ ಮತ್ತು ಹಂಬಲವನ್ನು ಸೂಚಿಸುವ ಪದ. ಮರೆತು ಹೋಗುತ್ತಿದ್ದ (ವಿಸ್ಮೃತಿಗೆ ಒಳಪಡುತ್ತಿದ್ದ) ಕನ್ನಡತನಕ್ಕೆ ತನ್ನದೇ ಆದ ದೇಶೀೀ ಸತ್ವ ಸೌಂದರ್ಯದಿಂದ ಒಡಗೂಡಿದ ಸ್ವತಂತ್ರವಾದು ದೊಂದು ಬದುಕಿನ ವಿಧಾನವಿದೆ. ಅದರ ಮೂಲವಿರುವುದು ಜನಗಳ ನಿತ್ಯದ ಬದುಕಿನ ನಂಬಿಕೆ, ಆಚರಣೆ, ಅಬಿsವ್ಯಕ್ತಿಗಳಲ್ಲಿ ಅದನ್ನೇ ಸ್ಥೂಲವಾಗಿ 'ಜಾನಪದ' ಎನ್ನುವುದು. ಪರಕೀಯ ಎನಿಸುವ ಜೀವನದೃಷ್ಟಿ, ಅನುಭವ, ಭಾಷೆಯ ಮಾದರಿಗಳಿಂದ ಬಿsನ್ನವೂ ಅನನ್ಯವೂ ಆದ ಒಂದು ಜೀವನಸ್ಥಿತಿ ಕನ್ನಡದ್ದು, ಅದರ ಸ್ವಂತಿಕೆಯನ್ನು ಹುಡುಕಿಕೊಂಡು ಪ್ರದರ್ಶಿಸುವ ಒಂದು ಸಾಂಸ್ಕøತಿಕ ಚಳವಳಿ 1900-1925ರಲ್ಲಿ ಆರಂಭವಾಯಿತು. ಈ ಹುಡುಕಾಟ ಮತ್ತು ನಮ್ಮತನದ ನಿರೀಕ್ಷೆ ಬಂದುದು ಇಂಗ್ಲಿಷಿನ ಸಂಪರ್ಕದಿಂದ ಅಥವಾ ವಸಾಹತುಶಾಹಿಯ ಒತ್ತಡದಿಂದ ಎಂಬ ತಿಳುವಳಿಕೆಯ ಭ್ರಮಾತ್ಮೀಕರಣಕ್ಕೆ ಒಳಗಾದೆವು. ಈ ಮೌಲ್ಯಗಳ ಶೋಧ ಹಾಗೂ ಸ್ವನಿರೀಕ್ಷೆಯ ಕ್ರಿಯೆ ಇಂಗ್ಲಿಷ್ ಮಾದರಿಯದಾಯಿತು. ಜನವಾಣಿಯ ಬೇರು ತನ್ನ ವಾಸನೆ ಮತ್ತು ಬಣ್ಣವನ್ನು ತೋರಿಸಿದ್ದು ಕವಿವಾಣಿಯ ಹೂವಿನಿಂದ, ಅದನ್ನು ಮೂಸುವ ಮೂಗು, ಮೂಸಬೇಕೆಂಬ ಅರಿವು ಕೂಡ ಇಂಗ್ಲಿಷಿನಿಂದಲೆ ಪ್ರೇರಿತವಾಯಿತೆಂದು ತಿಳಿಯಲಾಯಿತು. ಹೀಗಾಗಿ ನವೋದಯದ ಸ್ವರೂಪದಲ್ಲಿ 'ಕನ್ನಡತನ' ಎದ್ದು ಕಾಣದೆ ಒಳಗೇ ಅಡಗಿ ಉಳಿಯಿತು. ಹಾಗೆ ಅಡಗಿದುದನ್ನು ಹುಡುಕಿ ತೆಗೆದು ನವೋದಯದ ನೈಜ ಸತ್ವ ಸೌಂದರ್ಯವನ್ನು ತೋರಿಸಬೇಕಾದ ಉದ್ದೇಶವನ್ನು ಈ ಮಹಾಪ್ರಬಂಧ ಹೊಂದಿದೆ.
ಇದುವರೆಗಿನ ನವೋದಯ ಕಾವ್ಯದ ಬಗೆಗಿನ ಅಧ್ಯಯನ ವಿಮರ್ಶೆ ಚರ್ಚೆಗಳೆಲ್ಲ ಮೈಸೂರು ಕರ್ನಾಟಕದ ಪರಂಪರೆಯ ಸುತ್ತ ನಡೆದು 'ನವೋದಯ ಕಾವ್ಯ'ವೆಂದರೆ ಅದಷ್ಟೇ ಎಂಬ ಭಾವನೆ ಮೂಡಿರುವ ಹೊತ್ತಿನಲ್ಲಿ ಧಾರವಾಡ ಹಲಸಂಗಿ ನೆಲೆಗಳಿಂದ ಜಾನಪದದಿಂದ ಪ್ರಭಾವಿತ ನವೋದಯ ಕಾವ್ಯ ಕನ್ನಡವನ್ನು ಹೇಗೆ ಪ್ರವೇಶ ಮಾಡಿತು ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶ ಈ ಅಧ್ಯಯನ ಹೊಂದಿದೆ. ಇಂಗ್ಲಿಷ್ ಕಲಿತವರಿಂದಲೇ ಹಾಗೂ ಸಂಸ್ಕøತ ಮಾರ್ಗ ಅರಿತವರಿಂದಲೇ 'ನವೋದಯ' ಚಳವಳಿ ಪ್ರಭಾವಶಾಲಿಯಾಯಿತು ಎನ್ನುವುದೆಷ್ಟು ನಿಜವೋ ಇಂಗ್ಲಿಷ್ ಕಲಿಯದ ಅದರ ಸೋಂಕಿಲ್ಲದ ಸ್ವಂತಿಕೆ, ಆಂತರಿಕ ಒತ್ತಡಗಳಿಂದ ಬರೆದ ಆನಂದಕಂದ, ಮಧುರಚೆನ್ನ (ಇವರಿಗೆ ಇಂಗ್ಲಿಷ್ ಬರುತ್ತಿತ್ತು ಆದರೆ ಪ್ರಭಾವದಿಂದ ದೂರವಿದ್ದರು) ಬೇಂದ್ರೆ, ಶ್ರೀಧರ, ಖಾನೋಳಕರ, ಶಾಂತಕವಿ ಮತ್ತಿತರರು 1900 ರಿಂದ 1925-30ರ ಅವದಿsಯಲ್ಲಿ ಬರೆದ ಕಾವ್ಯ ಕನ್ನಡ ಜಾನಪದವನ್ನು ಧ್ವನಿಸಿದ ಶಿಷ್ಟ ಕಾವ್ಯ ಮುಂದೆ ಕಂಬಾರ, ಕಣವಿ, ಇಮ್ರಾಪುರ, ವಾಲೀಕಾರ ಅವರು ಇದನ್ನು ಮುಂದುವರೆಸಿದ್ದು ಕೂಡ ಚಾರಿತ್ರಿಕ ಸಂಗತಿ. ಹೀಗಾಗಿ ಈವರೆಗಿನ ನವೋದಯ ಕಾವ್ಯ ಬಗೆಗಿನ ವಿಮರ್ಶೆ, ಅವಲೋಕನ, ಅಧ್ಯಯನಗಳಿಂದ ತೀವ್ರತರವಾಗಿ ಉಪೇಕ್ಷೆಗೆ ಒಳಗಾಗಿರುವ ಸಾಂಸ್ಕøತಿಕ ಸತ್ಯವನ್ನು ಶೋದಿsಸುವುದು ಈ ಅಧ್ಯಯನದ ಸ್ವರೂಪವಾಗಿದೆ.
ಕನ್ನಡ ನವೋದಯ ಸಾಹಿತ್ಯ ಚರಿತ್ರೆಕಾರರು ಮುಖ್ಯವಾಗಿ ಮೂರು ನವೋದಯ ಕೇಂದ್ರಗಳನ್ನು (ಮೈಸೂರು, ಮಂಗಳೂರು, ಧಾರವಾಡ) ಗುರುತಿಸಿದ್ದಾರೆ. ಆದರೆ ಪ್ರಸ್ತುತ ಅಧ್ಯಯನವು ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸಿಕೊಂಡು ನವೋದಯ ಕಾವ್ಯಕ್ಕೆ ಜಾನಪದದ ಶಕ್ತಿ ತುಂಬಿ ಹೊಸದೊಂದು ಕಾವ್ಯ ಮಾರ್ಗವನ್ನು ತೆರೆದು ತೋರಿದ ಮಧುರಚೆನ್ನರ 'ಹಲಸಂಗಿ'ಯನ್ನು ನಾಲ್ಕನೆಯ ಕೇಂದ್ರವಾಗಿ ಸೃಜಿಸಿ ಇದು ಕನ್ನಡ ನವೋದಯದ ದೇಶೀೀಯತೆಗೆ ಸಾಕ್ಷಿಯಾದ ಸಾಂಸ್ಕøತಿಕ ಸಂದರ್ಭವನ್ನು ಈ ಅಧ್ಯಯನದಿಂದ ರೂಪಿಸಲಾಗಿದೆ.
ನವೋದಯ ಕಾವ್ಯ ಇಂದಿಗೂ ತನ್ನ ರಾಚನಿಕ ಸ್ವರೂಪದಿಂದ ಬಳಕೆಯಲ್ಲಿದೆ. ಜಾನಪದವನ್ನು ಪ್ರಭಾವಿಸಿಕೊಂಡು ಉಳಿದುಕೊಂಡು ಬಂದಿದೆ. ಪುನರ್‍ನವೋದಯದ ಮಾತುಗಳೂ ಕೇಳಿ ಬರುತ್ತಿವೆ. ಆದರೆ 1920ರಿಂದ 1945 ನವೋದಯದ ಸಂಭ್ರಮದ ಸುಗ್ಗಿಯ ಕಾಲ. ಹೀಗೆಂದರೆ ಇದರ ನಂತರ ನವೋದಯ ಸಾಹಿತಿಗಳು ಬರೆಯಲಿಲ್ಲ ಎಂದಾಗಲಿ, ಆ ಕಾಲದ ಚೇತನ ಬೇರೆಯವರ ಕೃತಿಗಳಲ್ಲಿ ಪ್ರಕಟವಾಗಲಿಲ್ಲ ಎಂದಾಗಲಿ ಅರ್ಥವಲ್ಲ. ಪ್ರಸ್ತುತ ಅಧ್ಯಯನದಲ್ಲಿ ನವೋದಯ ಕಾಲವನ್ನು 1920 ರಿಂದ 1945 ರವರೆಗೆ ಎಂದು ನಿರ್ಧರಿಸಿಕೊಂಡಿದ್ದರೂ ಈ ಕಾಲದ ಕವಿಗಳು ಮುಂದೆಯೂ ಕೃಷಿ ಮಾಡಿದ್ದರಿಂದ ಕಾಲವನ್ನು ಮೀರಿ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾಗಿದೆ.
ಒಟ್ಟಾರೆ ಕನ್ನಡ ನವೋದಯ ಕಾವ್ಯಕ್ಕೆ ಜಾನಪದದ ಪ್ರೇರಣೆ, ಪ್ರಭಾವ ಗುರುತಿಸಿ ಜನಪದ ಸಂವೇದನೆ ಮತ್ತು ಸಮಕಾಲೀನ ಮಿಳಿತವಾಗುವ ಬಗೆಯೊಂದಿಗೆ ನವೋದಯ ಕಾವ್ಯದ ಜಾನಪದ ಮಹತ್ವವನ್ನು ಸಾಂಸ್ಕೃತಿಕ ಅನನ್ಯತೆಯನ್ನು ಪರಿಶೀಲಿಸುತ್ತ, ಮುಖ್ಯ ಕವಿಗಳೊಂದಿಗೆ, ಕನ್ನಡ ಅವಲೋಕನದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಕವಿಗಳ ಕಾವ್ಯಾಭ್ಯಾಸವನ್ನು ಈ ಅಧ್ಯಯನ ಮುಖ್ಯವಾಗಿಟ್ಟುಕೊಂಡಿದೆ.
ಹೀಗೆ ಅಧ್ಯಾಯ 1 ರಲ್ಲಿ ಅಧ್ಯಯನದ ಉದ್ದೇಶ, ಸ್ವರೂಪ ಮತ್ತು ವ್ಯಾಪ್ತಿಯನ್ನು ಸ್ಪಷ್ಟಪಡಿಸಲಾಗಿದೆ.
ಅಧ್ಯಾಯ 2 ರಲ್ಲಿ ನವೋದಯ ಕಾವ್ಯದ ಜಾನಪದದ ಮಿತಿ ಹಾಗೂ ಶಕ್ತಿಯನ್ನು ಶೋದಿsಸಲಾಗಿದೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತುಂಬಾ ಆತ್ಮೀಯವಾದ, ಬಹುಜನಮಾನ್ಯವಾದ ಕಾವ್ಯ ನವೋದಯ ಸಾಹಿತ್ಯದಲ್ಲಿ ಒಡಮೂಡಿತು. ಆವರೆಗಿನ ಪಂಡಿತಮಾನ್ಯ ಸಾಹಿತ್ಯದ ಕಟ್ಟುಕಟ್ಟಳೆಗಳು ಸಡಿಲಗೊಂಡು ಅತಿರಂಜಿಕತವಲ್ಲದ, ಅತಿ ಬಿಗುವಲ್ಲದ ರಚನೆಯಿಂದ ಯಾರೂ ಆಸ್ವಾದಿಸಬಲ್ಲ, ಓದಿ, ಕೇಳಿ ಸವಿಯಬಲ್ಲ ಹಕ್ಕುಗಾರಿಕೆಯನ್ನು ಸಾಮಾನ್ಯರಲ್ಲೂ ಉಂಟುಮಾಡಿತು.
ಈ ಅಧ್ಯಾಯದಲ್ಲಿ
1. ವಸಾಹತುಕಾಲ ಮತ್ತು ದೇಸೀ ಪ್ರe್ಞÉಯ ವಿಸ್ಮ್ನೃತಿ 2. ಸ್ಥಗಿತಗೊಂಡ ಕಾಲ ಮತ್ತು ಉಪೇಕ್ಷಿತ ದೇಸೀ ಕಾವ್ಯ 3. ಕನ್ನಡದ ಅಸ್ತಿತ್ವದ ಅರಿವು ಮತ್ತು ಜನಪದ ಪ್ರe್ಞÉ 4. ಶಿಷ್ಟತೆಯ ಕೋಟೆ, ದೇಸೀಯತೆಯ ಬಯಲು ಹಾಗೂ 5. ಬದಲಾದ ಕಾವ್ಯ ಧೋರಣೆ ಮತ್ತು ಜಾನಪದ ಈ ಉಪಶೀರ್ಷಿಕೆಯಡಿಗಳಲ್ಲಿ ನವೋದಯ ಕಾವ್ಯಕ್ಕೆ ಜಾನಪದದ ಸಿದ್ಧತೆಯನ್ನು ಕಟ್ಟಿಕೊಡಲಾಗಿದೆ.
ಅನಾಮತ್ತಾಗಿ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಮಾರ್ಗದಲ್ಲಿ ಕೃಷಿ ಮಾಡಲಾರಂಬಿsಸಿದ ಕನ್ನಡ ಸಾಹಿತಿಗಳಿಗೆ ವಿಚಾರವಂತರಿಗೆ ಸ್ಥಳೀಯವಾದ ಮೌಖಿಕ ಕಾವ್ಯ ಸಂಪ್ರದಾಯಗಳು ಮೈಲಿಗೆ ಎನಿಸಿದ್ದವು. ಇಂಗ್ಲಿಷಿನಲ್ಲಿ ವ್ಯವಹರಿಸುವುದೇ ಗೌರವ ಮತ್ತು ನಾಗರಿಕ ಲಕ್ಷಣ ಎನ್ನುವ ವಸಾಹತು ಪ್ರe್ಞÉ ಸ್ಥಳೀಯವಾದದ್ದನ್ನು ಉಪೇಕ್ಷೆಗೆ ಒಳಗಾಗುವಂತೆ ಮಾಡಿತು. ಕನ್ನಡ ಸಾಹಿತ್ಯದಲ್ಲಿ 18-19ರ ಶತಮಾನದ ಕಾಲವನ್ನು ಬರಡು ಕಾಲವೆಂದು ಹೇಳಿಕೊಂಡು ಬರಲಾಗಿದ್ದ ಸಂದರ್ಭದಲ್ಲಿ ಜನಪದ ನೆಲೆಗಟ್ಟಿನಲ್ಲಿ ಮೂಡಿ ಬಂದ ಸಾಹಿತ್ಯವನ್ನು ಒಪ್ಪಿಕೊಳ್ಳದೆ, ಗುರುತಿಸಿ ಮನ್ನಣೆ ನೀಡದೆ ಉಪೇಕ್ಷಿಸಿದ್ದನ್ನು ಇಲ್ಲಿ ವಿಸ್ತೃತವಾಗಿ ದಾಖಲಿಸಲಾಗಿದೆ.
ಕನ್ನಡ ನವೋದಯ ಪೂರ್ವ ಮೈಸೂರು ಕರ್ನಾಟಕದಲ್ಲಿದ್ದ ಸ್ಥಿತಿಗೂ ಉತ್ತರ ಕರ್ನಾಟಕದಲ್ಲಿದ್ದ ಪರಿಸ್ಥಿತಿಗೂ ಗಮನಾರ್ಹ ವ್ಯತ್ಯಾಸಗಳಿದ್ದವು. ಶಾಸ್ತ್ರ ಪರಂಪರೆ ಮತ್ತು ಪ್ರಭುತ್ವ ಪರಂಪರೆ ಮೇಲಾಗಿದ್ದ ಮೈಸೂರು ಕರ್ನಾಟಕ ಭಾಗದಲ್ಲಿ ಬಿ.ಎಂ.ಶ್ರೀ ಅವರ 'ಅವಳ ತೊಡುಗೆ ಇವಳಿಗಿಟ್ಟು, ಇವಳ ತೊಡುಗೆ ಅವಳಿಗಿಟ್ಟು ನೋಡ ಬಯಸಿ, ಹಾಡ ಬಯಸಿ' ಕನ್ನಡ ನುಡಿಗೆ ತಂದ ಇಂಗ್ಲಿಷ್ ರಚನೆಗಳು ಆ ಕಾಲಕ್ಕೆ ಪಡೆದ ಜನಪ್ರಿಯತೆ ಎಲ್ಲರ ಪ್ರಶಂಸೆಗೆ ಪಾತ್ರವಾದವು. ಮೈಸೂರು ಭಾಗದಲ್ಲಿ ನಡೆಯುತ್ತಿದ್ದ ಈ ಕೆಲಸಕ್ಕೆ ಹಿನ್ನೆಲೆಯಾಗಿ ಕನ್ನಡತನದ ಗಟ್ಟಿಯಾದ ಭಾಷಾ ನೆಲೆ ಇತ್ತು. ಬೆನ್ನು ತಟ್ಟಿ ಪ್ರೋತ್ಸಾಹಿಸಲು ಕನ್ನಡ ರಾಜ ಮನೆತನದ ಮೈಸೂರು ಅರಸರಿದ್ದರು. ಬರಹದ ಶ್ರೇಷವಿತೆ ಗುರುತಿಸಲು ಪಂಡಿತ ಮಂಡಳಿ ಇತ್ತು. ಹೀಗಾಗಿ ಮೈಸೂರು ಭಾಗದಲ್ಲಿ ಬಂದ ಸಾಹಿತ್ಯ ಈ ನಾಡಿನ ಕೀರ್ತಿಗೆ ಭಾಜನವಾಗಲು ಕಾಯಬೇಕಿರಲಿಲ್ಲ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಇತ್ತು. ಈ ನೆಲವನ್ನಾಳುವ ಪ್ರಭುಗಳ ಭಾಷೆ ಬೇರೆ ಬೇರೆಯಾಗಿದ್ದವು, ಮೊಗಲರ ಕಾಲಕ್ಕೆ ಉರ್ದು ಫಾರಸಿ ಭಾಷೆಗಳು, ಪೇಶವೆಯರ ಕಾಲಕ್ಕೆ ಮರಾಠಿ ರಾಜ ಭಾಷೆಗಳಾಗಿದ್ದವು. ಅದರಂತೆ ಬ್ರಿಟಿಷರ ಕಾಲಕ್ಕೆ ಇಂಗ್ಲಿಷ್ ರಾಜ ಭಾಷೆಯಾಯಿತು. ಹೀಗೆ ನೆಲಕಚ್ಚಿದ ಕನ್ನಡವನ್ನು ತನ್ನೆಲ್ಲಾ ಶಕ್ತಿಯೊಂದಿಗೆ ಎದ್ದುನಿಲ್ಲಿಸಬೇಕಾದ ಜರೂರು ಇತ್ತು. ಈ ಕೆಲಸದಲ್ಲಿ ನಿಂತ ಕನ್ನಡ ಕೈಂಕರ್ಯದ ಬಂಟರು ಕೆಲವು ಕನ್ನಡ ಪ್ರೇಮಿ ಆಂಗ್ಲ ವಿದ್ವಾಂಸರೊಂದಿಗೆ ಕನ್ನಡ ಶಾಲೆಗಳನ್ನು ತೆರೆದರು. ಕನ್ನಡ ಪಠ್ಯಪುಸ್ತಕ ರಚಿಸಿದರು. ಮರಾಠಿ ಝಳಕ್ಕೆ ಬಾಡಿ ಹೋಗುತ್ತಿದ್ದ ಕನ್ನಡವನ್ನು ನಳನಳಿಸುವಂತೆ ಮಾಡಿದರು. ಇದರ ಫಲವಾಗಿ ಕನ್ನಡ ಉಸಿರಾಡುವಂತಾಯಿತು. ಈ ಕಾರಣವಾಗಿ ಶಾಂತಕವಿಗಳು, ಸಾಲಿ ರಾಮಚಂದ್ರರಾಯರು, ಆನಂದಕಂದ, ಬೇಂದ್ರೆ, ಮಧುರಚೆನ್ನ ಮೊದಲಾದವರು ಆ ಕಾಲಕ್ಕೆ ಬರೆದ ಕಾವ್ಯಗಳು ಕನ್ನಡತನವನ್ನು ಜೊತೆಗೆ ಈ ನೆಲದ ಜನಪದ ಸತ್ವದ ಗಟ್ಟಿತನ, ಶೈಲಿ ಚೌಕಟ್ಟು ಪಡೆದುಕೊಂಡು ರಚನೆಯಾದವು. ಹೀಗಾಗಿ ಬಹುಮಟ್ಟಿಗೆ ಭಾಷಾಂತರಯುಗವೆನ್ನಿಸಿಕೊಂಡ ಕಾಲದಲ್ಲಿ ಶಾಂತಕವಿ, ಸಾಲಿ, ಖಾನೋಳಕರ ಮೊದಲಾದವರು ಸ್ವೋಪಜ್ಞ ಕೃತಿ ರಚನೆ ಮಾಡಿದರು. ಅಲ್ಲದೆ 'ಹಲಸಂಗಿ ಗೆಳೆಯರ' ಜಾನಪದದ ಕಾಯಕದಿಂದ ಕನ್ನಡ ನವೋದಯ ಸಂದರ್ಭದಲ್ಲಿ ಜಾನಪದ ಸಂಗ್ರಹ ಕುರಿತಾದ ನಿಜವಾದ ಆಸಕ್ತಿ ಕನ್ನಡಿಗರಲ್ಲಿ ಮೂಡಿತು. ಪಾಶ್ಚಾತ್ಯ ಸಾಹಿತ್ಯಿಕ ಗಾಳಿಯನ್ನು ತಲೆಯಲ್ಲಿ ತುಂಬಿಕೊಂಡ ನವೋದಯದ ಅನೇಕ ಕವಿಗಳು ತಮ್ಮ ಕಾವ್ಯದ ಸೊಗಸು ಸೌಂದರ್ಯ ಲಾವಣ್ಯಗಳಿಗೆ ಒಟ್ಟಿನಲ್ಲಿ ಕಾವ್ಯ ಶೈಲಿಯ ಬಗೆಗೆ ಜನಪದ ಸಾಹಿತ್ಯವನ್ನು ಅನಿವಾರ್ಯವಾಗಿ ಆಶ್ರಯಿಸಬೇಕಾಯಿತು.
ಒಟ್ಟಾರೆ ಹೊಸಗನ್ನಡದ ಕಾವ್ಯ ಸ್ವರೂಪದ ರೂಪರೇಖೆಗಳು ಜಾನಪದೀಯವಾಗುವುದರ ಮೂಲಕ ಕಾವ್ಯ ಜನತೆಗೆ ಹತ್ತಿರವಾಗುವಂತೆ ಮಾಡಿದ ಸಾಧನೆಯನ್ನು ಈ ಅಧ್ಯಾಯದಲ್ಲಿ ರೂಪಿಸಲಾಗಿದೆ.
ಅಧ್ಯಾಯ 3 ರಲ್ಲಿ ನವೋದಯ ಕಾವ್ಯ ಜನಪದ ಸಂವೇದನೆ ಹಾಗೂ ಸಮಕಾಲೀನ ಜೀವನ ಪ್ರe್ಞÉ ಕುರಿತು ನವೋದಯ ಮತ್ತು ಜಾನಪದ ನೆಲೆಯಲ್ಲಿ ಚರ್ಚಿಸಲಾಗಿದೆ. ಇಲ್ಲಿ ಮೊದಲಿಗೆ ಜಾನಪದೀಯ ನೆಲೆಯನ್ನು ಸ್ಪಷ್ಟಪಡಿಸುತ್ತ ವಸಾಹತುಶಾಹಿ ಸಂದರ್ಭದಲ್ಲಿ ಅದರ ಮಹತ್ವ ಅರಿಯದೆ ಹೋದ ಸಂದರ್ಭದಲ್ಲಿ ದೇಸೀವಾದಿ ಚಿಂತನೆಗಳು ಹುಟ್ಟಿಕೊಳ್ಳುವ ಮೂಲಕ ಸ್ಥಳೀಯ ಕಾವ್ಯಕ್ಕೆ ಪ್ರಾಪ್ತವಾದ ಜೀವಂತಿಕೆಯನ್ನು ಮನಗಾಣಲಾಗಿದೆ. ವಸಾಹತುಶಾಹಿ ತನ್ನ ಉದ್ದೇಶದ ಈಡೇರಿಕೆಗಾಗಿ ಬಳಸಿದ ತಂತ್ರಗಳು ಒಟ್ಟು ದೇಸೀಯತೆಯನ್ನು ಹತ್ತಿಕ್ಕುವುದೇ ಆಗಿತ್ತು. ಆದರೆ ಪುರಾತನ ಜಾಗೃತಿಯೊಂದಿಗೆ ನಡುವೆಯೇ ಬಂದ ಇಂಥ ಚಿಂತನೆಗಳು ವ್ಯಾಪಕವಾಗಿ ಹಬ್ಬದಿರಲು ಇಲ್ಲಿನ ಗಟ್ಟಿಗೊಂಡ ಸಾಂಸ್ಕøತಿಕ ಸಂದರ್ಭಗಳನ್ನು ಶೋದಿsಸಲಾಗಿದೆ.
'ಮೌಖಿಕ ಸಂವಹನ ಮತ್ತು ಲಿಖಿತ ಪಾಠ' ಕುರಿತು ಚರ್ಚಿಸುತ್ತಾ ನವೋದಯ ಸಂದರ್ಭದ ಭಾರತೀಯ ಸಂವೇದನೆಯಲ್ಲಿ ಇಂಗ್ಲಿಷ್ ಶಿಕ್ಷಣ ಕ್ರಮ ಮತ್ತು ವಸಾಹತುಶಾಹಿ ಕಾರಣವಾಗಿ ಉಂಟಾದ ಸಂಘರ್ಷದ ನೆಲೆ ಕನ್ನಡ ಭಾಷಿಕ, ಸಾಂಸ್ಕøತಿಕ ಪರಿಸರದ ಮೇಲಾದ ಪ್ರಭಾವ ಅದಕ್ಕೆ ವಿರುದ್ಧವಾಗಿ ನಡೆದ ದೇಸೀಯ ಒಳ ಬಂಡಾಯ ಹುಟ್ಟುಹಾಕಿದ ಸಂಸ್ಕøತಿ ಬಗೆಗಿನ ಚಲನಶೀಲವಾದ ಪರಿಕಲ್ಪನೆಯನ್ನು ಕಟ್ಟಿಕೊಡಲಾಗಿದೆ. ಮೌಖಿಕ ಮತ್ತು ಲಿಖಿತ ಕಾವ್ಯ ಉಂಟುಮಾಡಿದ ಪ್ರಭಾವಗಳನ್ನು ಗುರುತಿಸಲಾಗಿದೆ. ಮೌಖಿಕ ಕಾವ್ಯ ಕಟ್ಟಿದ ಜನಪದರು ಸ್ಥಳೀಯ ಚರಿತ್ರೆ ಕಟ್ಟಿಕೊಡುವ ಚರಿತ್ರೆಕಾರರಾಗುತ್ತಾರೆ. ಗಾಂದಿs ಅವರು ತಮ್ಮ ಸಂದೇಶಕ್ಕಾಗಿ ಜನಪದ ಹಾಡುಗಾರರನ್ನು ಅವಲಂಬಿಸುತ್ತಾರೆ. ಅಕ್ಷರ ಪಠ್ಯದ ಸಂವಹನಕ್ಕಿಂತ ಧ್ಟನಿ ಸಂವಹನ ಪಠ್ಯ ಬಹಳ ಮುಖ್ಯವಾಗಿದೆ. ಹೀಗೆ ಸ್ಥಳೀಯತೆಯನ್ನೇ ಪ್ರಧಾನವಾಗಿಯುಳ್ಳ ದೇಸೀಯ ಒಲವುಗಳು ನವೋದಯ ಕಾವ್ಯವನ್ನು ಪ್ರಭಾವಿಸಿಕೊಂಡುದರ ಕಡೆಗೆ ತೋರುಬೆರಳಾಗುತ್ತವೆ.
'ಜನಪದ ಕಾವ್ಯ ಸಮಕಾಲೀನ ಆಶಯಗಳು' ಎನ್ನುವ ಉಪಶೀರ್ಷಿಕೆಯಡಿಯಲ್ಲಿ ಶಿಷ್ಟ ಕಾವ್ಯವು ಜಾನಪದದಿಂದ ಪಡೆದುಕೊಳ್ಳುವ ಹೊಸತನ ಹಾಗೂ ಅದರ ಜೀವಂತಿಕೆಯನ್ನು ಸ್ಪಷ್ಟಪಡಿಸಲಾಗಿದೆ. ಡಾ.ದೇಶೀಗೌ ಅವರು “ಶಿಷ್ಟ ಸಾಹಿತ್ಯ ಮಡುಗೊಂಡು, ಪಾಚಿ ಬೆಳೆದು, ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯವಾಹಿನಿ ಅದರ ಮೇಲೆ ಹರಿದು ಪಾಚಿ, ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು'' (ಜಾನಪದ ಅಧ್ಯಯನ, 1991) ಎಂದು ಜನಪದದ ಮಹತ್ವ ಸಾರಿದ್ದಾರೆ. ಜೊತೆಗೆ ''ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ” ಎಂದಿದ್ದಾರೆ ಇಲ್ಲಿ ಜನಪದಗೀತೆಗಳ ವಿಶಿಷ್ಟತೆ ಗುರುತಿಸಲಾಗಿದೆ. ಗಿರಡ್ಡಿ ಗೋವಿಂದರಾಜ ಅವರು ಹೇಳಿದ 'ಜನಪದ ಸಾಹಿತ್ಯಕ್ಕೆ ಪ್ರತ್ಯೇಕ ತತ್ವಗಳಿಲ್ಲ ಅದನ್ನು ಶಿಷ್ಟ ಸಾಹಿತ್ಯದಂತೆ ನೋಡಬೇಕು' ಎಂಬ ಮಾತನ್ನು ಚರ್ಚೆಗೆ ಒಳಪಡಿಸಿ ಜನಪದಕಾವ್ಯ ಪರಂಪರೆಯ ಇತಿಹಾಸ ಮತ್ತು ಪ್ರಸ್ತುತತೆಯನ್ನು ಹೇಳಿ ಪ್ರಭು ಸಂಸ್ಕøತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಜಾನಪದಕ್ಕೆ ಅನ್ವಯಿಸಿಕೊಳ್ಳುವ ಮಾನದಂಡದ ಬಗ್ಗೆ ತಕರಾರು ಎತ್ತಲಾಗಿದೆ.
'ಕಾವ್ಯವಸ್ತು: ನವೋದಯ ಮತ್ತು ಜಾನಪದ' ಈ ಉಪಶೀರ್ಷಿಕೆಯಲ್ಲಿ ಆಧುನಿಕ ಕನ್ನಡ ಕಾವ್ಯದಲ್ಲಿ ನವೋದಯ ಕಾಣಿಸಿಕೊಂಡಾಗ ಅದು ಒಳಗೊಳ್ಳುವ ವಸ್ತುವು ವಿಸ್ತಾರ ಮತ್ತು ವ್ಯಾಪಕವಾಯಿತು. ಈ ವಿಸ್ತಾರ ಮತ್ತು ವ್ಯಾಪಕತೆಗೆ ಜನಪದ ಕಾವ್ಯ ಪ್ರೇರಣೆ ನೀಡಿತು. ಜಾನಪದವು ಸಾಮೂಹಿಕ ಸೃಷ್ಟಿಯ ಉತ್ಪನ್ನಗಳಾದರೂ ಶಿಷ್ಟ ಸಮೂಹದ ಅಗತ್ಯಗಳನ್ನು ಪೂರೈಸಿದೆ. ತುಂಬಾ ವಿಸ್ತೃತವಾಗಿಯೇ ಜಾನಪದವು ಶಿಷ್ಟಕಾವ್ಯದ ಶ್ರೇಷವಿತೆಗೆ ನೀಡಿದ ಸಂದರ್ಭಗಳನ್ನು ಅದರ ವಿಶಿಷ್ಟ ಲಕ್ಷಣಗಳೊಂದಿಗೆ ಚರ್ಚಿಸಲಾಗಿದೆ. ಜೊತೆಗೆ 'ಕನ್ನಡ ಶಿಷ್ಟ ಕಾವ್ಯದಲ್ಲಿ ದೇಸೀ ಕವಿತ್ವ' ಶೀರ್ಷಿಕೆ ಅಡಿಯಲ್ಲಿ ಕನ್ನಡ ಕಾವ್ಯ ಪರಂಪರೆಯ ಶಿಷ್ಟತೆಗೆ ಜಾನಪದದ ಪ್ರಭಾವವನ್ನು ಗುರುತಿಸಿ ಸಂದರ್ಭಗಳನ್ನು ದಾಖಲಿಸಲಾಗಿದೆ.
ಅಧ್ಯಾಯ 4 ರಲ್ಲಿ 'ನವೋದಯ ಕಾವ್ಯದ ಪ್ರೇರಕ ಚಳವಳಿ'ಗಳನ್ನು ರೂಪಿಸಲಾಗಿದೆ. ಆಧುನಿಕ ಪೂರ್ವ ಸಾಹಿತ್ಯದ ಅಧ್ಯಯನ ಸಂಸ್ಕøತದ ಹಂಗಿನಲ್ಲಿ ನಡೆದರೆ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅದು ಐರೋಪ್ಯ ಮಾದರಿಯಲ್ಲಿ ನಡೆಯಿತು. ಹೀಗೆ ಕನ್ನಡ ಭಾಷೆ ಮತ್ತು ಸಮಾಜ ಮೊದಲಿನಿಂದಲೂ ರಾಜಪ್ರಭುತ್ವ, ಪಾಳೆಗಾರಿಕೆ, ವಸಾಹತುಶಾಹಿ ಪ್ರಭಾವಗಳಿಗೆ ಒಳಗಾಗುತ್ತ ವಿರೋದಿsಸುತ್ತ ಬೆಳೆದು ಬಂದಿದೆಯಾದರೂ ನಮ್ಮದಲ್ಲದ ಭಾಷೆ, ಸಂಸ್ಕøತಿ, ಓದು, ಬರಹ, ಅಧ್ಯಯನದ ವ್ಯಾವೋಹದಿಂದ ನಾವು ಮುಕ್ತರಾಗಿಲ್ಲ ಎಂಬುದು ಆಧುನಿಕ ಅಧ್ಯಯನ ಮಾದರಿಗಳು ಹುಟ್ಟು ಹಾಕಿದ ಕುರುಡು ಧೋರಣೆಯನ್ನು ಪುನರ್ ಅವಲೋಕಿಸುವ ಜರೂರತೆಯಲ್ಲಿ ಈ ಅಧ್ಯಾಯದಲ್ಲಿ ನವೋದಯ ಆರಂಭದ ಕನ್ನಡ ಕಾವ್ಯವನ್ನು ರೂಪಿಸಿದ ಹರಿದಾಸರು, ತತ್ತºಪದಕಾರರು, ಲಾವಣಿಕಾರರು ಕಟ್ಟಿಕೊಟ್ಟ ಕಾವ್ಯವನ್ನು ಕನ್ನಡ ನವೋದಯ ಕಾವ್ಯದ ಜನಪದ ಪ್ರಭಾವದ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಕನ್ನಡ ಸಾಹಿತ್ಯದ ಕತ್ತಲು ಕಾಲ, ಅಸಾರತೆಯ ಸಂದರ್ಭ ಎಂದು ಕರೆಸಿಕೊಂಡ ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗಿನ ಕಾಲದಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮೂಡಿ ಬಂದ ಸ್ಥಳೀಯ ಕಾವ್ಯ ಸಂದರ್ಭಗಳನ್ನು ಪರಿಗಣಿಸಿ ನೋಡಿದಾಗ ಅದೊಂದು 'ದೇಸೀ ಸಾಹಿತ್ಯದ ಸುವರ್ಣಯುಗ' ಎಂದು ಕರೆಸಿಕೊಳ್ಳುವುದು ಖಚಿತವಾಗುತ್ತದೆ.
ನಾದಮೂಲವಾದ ಹಾಡು ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು. ಆ ಹಾಡಿಗೆ ರಾಗ ತಾಳಗಳನ್ನು ಜೋಡಿಸಿ ನರ್ತಿಸುತ್ತ ಹರಿದಾಸ ಸಾಹಿತ್ಯದ ಸವಿಯನ್ನು ಸಾಮಾನ್ಯನಿಗೂ ತಿಳಿಯುವಂತೆ ದಾಸರು ಸರಳಗನ್ನಡದಲ್ಲಿ ಹೇಳಿದರು. ದಾಸರು ಕನ್ನಡದ ಜನಸಾಮಾನ್ಯರ ಆಡುಮಾತನ್ನು ಪ್ರಧಾನ ಮಾಧ್ಯಮವಾಗಿ ದುಡಿಸಿಕೊಂಡಿರುವುದು ಕಾಣುತ್ತೇವೆ. ಕನ್ನಡ ನುಡಿಯ ಸೊಬಗು, ಸಂಭ್ರಮ, ಶಬ್ದಗಳ ಮಧುರ ಜೋಡಣೆ ಲೀಲಾಜಾಲ ಶೈಲಿಯಿಂದ ಹಾಗೂ ಗೇಯತೆಯ ಸಂಸ್ಪರ್ಶದಿಂದ ಹೊಸ ಮಾರ್ಗ ಸ್ಥಾಪಿಸಿ ಹರಿದಾಸರು ಭಾಷೆಯನ್ನು ಬೆಳಸಿದ್ದಾರೆ. ನುಡಿಗಟ್ಟುಗಳು ಜನಪದರಿಂದಲೇ ಎತ್ತಿಕೊಂಡಷ್ಟು ಹೊಳೆಯುತ್ತಿವೆ. ಜನ ಬಳಕೆಯ ಗಾದೆಗಳನ್ನು ಧಾರಾಳವಾಗಿ ಬಳಸಿದ್ದಾರೆ. ಹೊಸ ಗಾದೆಗಳನ್ನು ಹುಟ್ಟು ಹಾಕಿದ್ದಾರೆ.
ತತ್ತ್ವಪದ ಸಾಹಿತ್ಯ ನವೋದಯ ಕಾವ್ಯದ ಅಪ್ಪಟ ಮಾದರಿಗಳಿಗೆ ಪೂರಕವಾಗಿವೆ. ಸೃಜನಶೀಲ ಕಾವ್ಯದ ಎಲ್ಲ ಬಗೆಯ ಲಕ್ಷ್ಯ ಲಕ್ಷಣಗಳನ್ನು ರೀತಿ ನೀತಿಗಳನ್ನು ಆಗಲೇ ಕಟ್ಟಿಕೊಂಡಿದ್ದ ಈ ರಚನಾಕಾರರು ಎಲ್ಲ ಬಗೆಯ ವಸ್ತು ಸಂಗತಿಗಳಿಗೆ ಸ್ಪಂದಿಸಿದರು. ಗ್ರಾಮ್ಯವನ್ನು ಬಳಸಿ ತತ್ತºಪದಕಾರರು ತಮ್ಮಅಂತರಂಗದ ಸೂಕ್ಷ್ಮ ಭಾವನೆಗಳನ್ನು ಆರೋಗ್ಯಕರ ಪ್ರೇಮವನ್ನು, ಬ್ರಿಟಿಷರ ದಬ್ಬಾಳಿಕೆ ಮತ್ತು ಕ್ರೂರ ಯಂತ್ರನಾಗರಿಕತೆಯ ಸಂದರ್ಭದಲ್ಲಿ ನಾಶಗೊಳ್ಳುತ್ತಿದ್ದ ಮನುಷ್ಯ ಸಂಬಂಧಗಳನ್ನು ಕುರಿತು ಅವರು ಪದಕಟ್ಟಿ ಹಾಡಿದರು.
ಗಡಗಿ ತೊಳೆದು ಅಡಗಿ ಮಾಡಮ್ಮ | ತನುವೆಂಬ
ಗಡಗಿ ತೊಳೆದು ಅಡಗಿ ಮಾಡಮ್ಮ
ಹೀಗೆ ಸಾಗುವ ಕಡಕೋಳ ಮಡಿವಾಳಪ್ಪನವರ ತತ್ತ್ವಪದದಲ್ಲಿ ಜನರಾಡುವ ಮಾತಿನಲ್ಲಿ ಕಾವ್ಯತ್ವದ ಶಕ್ತಿ ತುಂಬಿದರು. ಹೀಗೆ ಶರೀಫ್ ಮತ್ತು ಹೈದರಾಬಾದ ಕರ್ನಾಟಕದ ಭಾಗದ ತತ್ತ್ವಪದಕಾರರ ಮೌಖಿಕ ಕಾವ್ಯದ ಸಾಧನೆಯನ್ನು ಇಲ್ಲಿ ದಾಖಲಿಸುತ್ತಾ ಜನಪದ ನೆಲೆಯಿಂದ ಹೊಸ ಕಾವ್ಯದ ಬಹುಮುಖಿ ನೆಲೆಗಳನ್ನು ಸಾಂದಬಿರ್sಕವಾಗಿ ಗುರುತಿಸಲಾಗಿದೆ.
ಲಾವಣಿ ಕಾವ್ಯಶಕ್ತಿ ಉಪಶೀರ್ಷಿಕೆಯಲ್ಲಿ ನವೋದಯ ಕಾವ್ಯವು ಮುಖ್ಯವಾಗಿ ತನ್ನರೂಪ, ಶೈಲಿ, ವೈವಿಧ್ಯತೆ ಎಲ್ಲವನ್ನೂ ದೇಸೀಮೂಲವಾಗಿರುವುದನ್ನು ಸ್ಪಷ್ಟಪಡಿಸಲಾಗಿದೆ. ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು 'ದಕ್ಷಿಣ ಮಹಾರಾಷ್ಟ್ರ'ವೆಂದೇ ಕರೆಸಿಕೊಂಡಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿ ರಸಬಳ್ಳಿಯಂತೆ ಹಬ್ಬಿದೆ. 'ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ' ಎಂದಿದ್ದಾರೆ ವಾಮನ ಬೇಂದ್ರೆಯವರು.
ಹಲಸಂಗಿ ಗೆಳೆಯರು ಮೊದಲ ಬಾರಿಗೆ ಲಾವಣಿ ಸಾಹಿತ್ಯವನ್ನು ಪ್ರಕಟಿಸಿ,ಪ್ರಸಾರ, ಪ್ರಚಾರ ಮಾಡುವುದರೊಂದಿಗೆ ಕನ್ನಡ ಅಕ್ಷರಲೋಕಕ್ಕೆ ದೇಸೀ ಕಾವ್ಯದ ಉತ್ಕøಷ್ಟ ಸ್ಥಾನ ನೀಡಿದರು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರ ಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಈ ಸಾಧನೆಯ ಪ್ರತೀಕವಾಗಿ ಹೊರಬಂದ 'ಗರತಿಯ ಹಾಡು'(1931), ಜೀವನ ಸಂಗೀತ(1933), ಮಲ್ಲಿಗೆ ದಂಡೆ(1935), ಜನಪದ ಗೀತ ಸಂಕಲನಗಳು ಕನ್ನಡ ಕಾವ್ಯಲೋಕದಲ್ಲಿ ವಿದ್ಯುತ್ ಸಂಚಲನ ಉಂಟುಮಾಡಿದವು.
ಹಲಸಂಗಿ ಗೆಳೆಯರ 'ಜೀವನ ಸಂಗೀತ' ಲಾವಣಿ ಸಂಕಲನವು ಹಲವು ನೆಲೆಯಲ್ಲಿ ಕನ್ನಡ ಕಾವ್ಯವನ್ನು ಚೇತನಗೊಳಿಸಿತು. ಇಲ್ಲಿನ ಖಾಜಾಭಾಯಿಯ ಲಾವಣಿಗಳು ಮಧುರಚೆನ್ನರ ಕಾವ್ಯಕ್ಕೆ ಸ್ಪೂರ್ತಿ ನೀಡಿದವು. 'ಜೀವನ ಸಂಗೀತ'ವು ಕನ್ನಡ ಲಾವಣಿ ಸಾಹಿತ್ಯದ ಬಹುಮುಖ್ಯವಾದ ಕೃತಿಯಾಗಿ ಹೊರಹೊಮ್ಮುವುದರೊಂದಿಗೆ ಆ ಕಾಲಕ್ಕೆ ಅಡಿಯಿಟ್ಟ ಕನ್ನಡ ನವೋದಯಕ್ಕೆ ಮೊದಲ ಪಂಕ್ತಿಯ ಸಾಧಕ ಕೃತಿ ಎನಿಸಿತು. ಇಲ್ಲಿಯ ಎಲ್ಲ ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು, ಗಮ್ಮತ್ತು ನವೋದಯ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ 'ಭಾವಗೀತ' ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧ ಉಂಟು. ರಗಳೆಯ ಲಯ, ಅಂಶ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತೆಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿದ್ದು ಸ್ಪಷ್ಟವಾಗುತ್ತದೆ. ಕವಿ ಮತ್ತು ಕವಿತೆಯನ್ನು ಒಂದು ಜನಪ್ರಿಯ ನೆಲೆಯಲ್ಲಿ ತಂದು ಜನಸಾಮಾನ್ಯರ ನಾಲಗೆಯ ಮೇಲೆ ತಮ್ಮ ರಚನೆಗಳು ಉಳಿಯುವಂತೆ ಮಾಡುವುದರೊಂದಿಗೆ ವಿದ್ವತ್ ವಲಯವೆಂದು ಹೇಳಿಕೊಂಡು ಬಂದ ವಸಾಹತುಶಾಹಿ ಪ್ರe್ಞÉಯ ಮನೋಭಾವದ ಲೇಖಕರನ್ನು ಅಚ್ಚರಿಗೊಳಿಸಿ ಒಂದು ಬಗೆಯಲ್ಲಿ ಕುತೂಹಲ, ಆಸಕ್ತಿ ಮೂಡಿಸುತ್ತ ನಾದದ ಗುಂಗು ಹಿಡಿಸಿದ ಈ ಕವಿಗಳು ಒಟ್ಟಿಗೆ ಕನ್ನಡ ಕಾವ್ಯಕ್ಕೆ ಜನಪದ ಸತ್ವಶಕ್ತಿಯ ಮಹತ್ತನ್ನು ತುಂಬಿ ಹಾಡುಕಟ್ಟಿದ್ದು ಕನ್ನಡ ನವೋದಯ ಕಾವ್ಯ ಸಂದರ್ಭದ ಸಾಧನೆ ಎನಿಸಿದೆ.
ಅಧ್ಯಾಯ 5 ರಲ್ಲಿ 'ನವೋದಯದ ನಾಲ್ಕು ಕೇಂದ್ರಗಳು ಕಾವ್ಯ ಮತ್ತು ಜಾನಪದದ ಹಿನ್ನೆಲೆ' ವಿಶ್ಲೇಷಿಸಲಾಗಿದೆ. ಕನ್ನಡ ನವೋದಯ ಕಾಲವು ಸ್ವಾತಂತ್ರ್ಯೋತ್ಸಾಹದ ಕಾಲವಾಗಿತ್ತು. ಆ ಕಾಲದ ಯಾವ ಕವಿಯೂ ರಾಷ್ಟ್ರೀಯ ಭಾವನೆಯಿಂದ ಹೊರಗುಳಿದು ಬರೆಯುವ ಸಾಧ್ಯವಿರಲಿಲ್ಲ. ರಾಷ್ಟ್ರೀಯತೆ, ಪ್ರಕೃತಿ, ಪ್ರೇಮ, ಭಕ್ತಿ ಮುಂತಾದ ಭಾವ-ಭಾವನೆಗಳ ಪೂರದಲ್ಲಿ ಹಳೆಯ ಪರೆಯನ್ನು ಕಳಚಿ ಹೊಸ ದೇಹವನ್ನು ಪಡೆದ ರೀತಿಯಲ್ಲಿ ನವೋದಯ ಕಾವ್ಯ ತನ್ನ ಅಬಿsವ್ಯಕ್ತಿ ಸಾಧ್ಯತೆಗಳನ್ನೆಲ್ಲ ನಿರ್ದಿಷ್ಟ bsÀಂದೋ ರೂಪ, ಕಾವ್ಯಕ್ಕೆಂದೆ ಕಟ್ಟಿಕೊಂಡ ಭಾಷಾ ರೀತಿಯಲ್ಲಿ ಬಳಕೆಯಾಗಿ ಪರಕೀಯ ಆಶಯಗಳನ್ನು ಪ್ರಧಾನೀಕರಿಸಿಕೊಂಡು ರಚನೆಯಾಗುತ್ತಿರುವ ಹೊತ್ತಿನಲ್ಲಿ 'ಹಲಸಂಗಿ ಕೇಂದ್ರ'ದ ಕವಿಗಳು 'ಜಾನಪದ'ವನ್ನು ಹರವಿಡುವ ಮೂಲಕ ಹೊಸ ಬೆಳೆಗೆ ದೇಸೀಯ ಕಳೆ ನೀಡಿದರು. ನವೋದಯ ಕಾವ್ಯದ ಪ್ರಧಾನ ಬಿsತ್ತಿಯಾದ 'ಅನುಭಾವ'ವೂ ಜಾನಪದದ ಒಡಲೊಳಗಿಂದ ಉದಯಿಸಿ ಬಂದಿತು. ವಚನಕಾರರು, ತತ್ತºಪದಕಾರರು, ಹರಿದಾಸರು, ಲಾವಣಿಕಾರರು ಕಟ್ಟಿಕೊಟ್ಟ ಅನುಭಾವ, ತತ್ತ್ವಸಾಹಿತ್ಯವು ಜಾನಪದ ನೆಲೆಯಿಂದ ಬಂದುದು. ಮಧುರಚೆನ್ನರ 'ನನ್ನ ನಲ್ಲ' ಅನುಭಾವ ಕಾವ್ಯದ ಪ್ರಧಾನ ಆಶಯವಾಗಿದ್ದರೂ ಅದರ ಬಾಹ್ಯ ಮತ್ತು ಒಳ ಸಂವೇದನೆಗಳು ಜಾನಪದವಾಗಿರುವುದನ್ನು ಗುರುತಿಸಲಾಗಿದೆ.
ಜಾನಪದ ಪರಿಸರ ಮತ್ತು ದೇಸೀ ಪ್ರಭಾವ ನವೋದಯ ಕಾವ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಕವಿಗಳ ಮೇಲೆ ಆಗಿರುವುದು ಗಮನಾರ್ಹವಾಗಿದೆ. ನವೋದಯದ ಪ್ರಾರಂಭದಲ್ಲಿಯೇ ಉತ್ಕøಷ್ಟವಾದ ಕಾವ್ಯ ಗುಣದಿಂದ ಕೂಡಿದ ಜನಪದ ಗೀತ ಸಂಗ್ರಹಗಳು ಪ್ರಕಟಗೊಂಡದ್ದೂ ಹಾಗೂ ಬೇಂದ್ರೆ, ಮಧುರಚೆನ್ನ, ಆನಂದಕಂದರಂಥ ಹಿರಿಯ ಕವಿಗಳು ಜಾನಪದದ ಕಡೆಗೆ ಒಲಿದದ್ದು ಒಂದು ಮಹತ್ವದ ಕಾರಣವಾಗಿದೆ.
ಇಲ್ಲಿ ನವೋದಯದ ಮೈಸೂರು ಕೇಂದ್ರ, ಮಂಗಳೂರು ಕೇಂದ್ರ, ಧಾರವಾಡ ಕೇಂದ್ರ ಹಾಗೂ ಹಲಸಂಗಿ ಕೇಂದ್ರಗಳ ಕಾವ್ಯದ ಜಾನಪದದ ಹಿನ್ನೆಲೆಯನ್ನು ಆ ಕಾಲದ ಪರಿಸರದೊಂದಿಗೆ ವಿಸ್ತೃತವಾಗಿಯೇ ಶೋದಿsಸಲಾಗಿದೆ.
'ನವೋದಯ ಮೈಸೂರು ಕೇಂದ್ರ' ಭಾಗದಲ್ಲಿ ಬಿ.ಎಂ.ಶ್ರೀ, ಕುವೆಂಪು, ಡಿ.ವಿ.ಜಿ., ಮಾಸ್ತಿ, ವಿ.ಸೀ., ಪು.ತಿ.ನ, ಜಿ.ಪಿ.ರಾಜರತ್ನಂ, ಕೆ.ಎಸ್.ನರಸಿಂಹಸ್ವಾಮಿ, ಮೊದಲಾದವರ ಕಾವ್ಯಾಭ್ಯಾಸದೊಂದಿಗೆ ಜಾನಪದದ ಹಿನ್ನೆಲೆಯನ್ನು ಶೋದಿsಸುವ ಕಾರ್ಯ ಮಾಡಲಾಗಿದೆ. ಜನರಾಡುವ ಪದ ಬಳಕೆಯ ರಚನೆಗಳು ಇಲ್ಲಿ ಕಂಡರೂ ಒಂದು ವಿಶಿಷ್ಟವಾದ ಶಿಷ್ಟ ಪ್ರe್ಞÉ ಇಲ್ಲಿ ಕೆಲಸ ಮಾಡಿದ್ದು ಕಂಡಿದೆ. ಅಂದರೆ ಕವಿಯ ಸುಶಿಕ್ಷಿತ ಶಿಷ್ಟ ಪ್ರe್ಞÉ ತನಗೆ ಬಿsನ್ನವಾದ ಜನಪದ ಭಾಷೆಯ ಮೂಲಕ ಅಬಿsವ್ಯಕ್ತಗೊಳ್ಳುವ ಪ್ರಯತ್ನದಲ್ಲಿ ಆ ಭಾಷೆಯ ಸಾಧ್ಯತೆಗಳ ಜೊತೆ ಸೆಣಸಾಡಿತಾದರೂ ತನ್ನ ಶಿಷ್ಟ ಪ್ರe್ಞÉಯನ್ನು ಪ್ರಾಪ್ತಗೊಳಿಸಿಕೊಟ್ಟ ಶಿಷ್ಟ ಭಾಷೆಯನ್ನು ಅದರೊಟ್ಟಿಗೇ ಒಂದು ವಿಶಿಷ್ಟ ಹದ ಮತ್ತು ಅನನ್ಯತೆಯಲ್ಲಿ ಬೆಸೆಯಲು ಪ್ರಯತ್ನಿಸಲಿಲ್ಲ ಎಂಬುದರ ವಿಸ್ತೃತ ಚಿಂತನೆ ಉದಾಹರಣೆಗಳ ಮೂಲಕ ಪ್ರಕಟಿಸಲಾಗಿದೆ.
'ಮಂಗಳೂರು ನವೋದಯ ಕೇಂದ್ರ' ಈ ಉಪ ಶೀರ್ಷಿಕೆಯಲ್ಲಿ ಒಂದೆಡೆ ಅರಬ್ಬಿ ಸಮುದ್ರ, ಇನ್ನೊಂದೆಡೆ ಪಶ್ಚಿಮದ ಘಟ್ಟ ಸಾಲುಗಳ ಮಧ್ಯೆ ಕರ್ನಾಟಕದ ಪ್ರಾಕೃತಿಕ ಸೌಂದರ್ಯದ ಒಂದು ದ್ವೀಪವಾಗಿ ಕಂಗೊಳಿಸುತ್ತಿರುವ ಕರಾವಳಿ ಪ್ರದೇಶವು ಕನ್ನಡ ನವೋದಯಕ್ಕೆ ನೀಡಿದ ತನ್ನದೇ ಆದ ದೇಸೀ ಅಲೆಗಳನ್ನು ಇಲ್ಲಿ ಹಿಡಿದಿಡಲಾಗಿದೆ.
ಭಾಷೆಯ ದೃಷ್ಟಿಯಿಂದ ಮಂಗಳೂರು ಕೇಂದ್ರದ ಕವಿಗಳು ಎದುರಿಸಿದ ಸಮಸ್ಯೆಯನ್ನು ಬೇರೆ ಭಾಗದ ಕವಿಗಳು ಎದುರಿಸಬೇಕಾದ ಪರಿಸ್ಥಿತಿ ಇರಲಿಲ್ಲ. ಈ ಭಾಗದ ಹೆಚ್ಚಿನ ಕವಿಗಳಿಗೆ ಕನ್ನಡ ಮಾತೃಭಾಷೆ ಅಲ್ಲ ಪರಿಸರ ಭಾಷೆಯೂ ಅಲ್ಲ ತುಳು ಇಲ್ಲವೆ ಕೊಂಕಣಿ ಅವರ ಮನೆ ಮಾತು. ಪರಿಸರದಲ್ಲಿ ಇದ್ದದ್ದೂ ಇದೇ ಭಾಷೆಗಳು. ಈ ಭಾಷೆಗಳನ್ನು ಬಿಟ್ಟು ಶಾಲೆಯಲ್ಲಿ ಕಲಿತ ಎರಡನೆಯ ಭಾಷೆಯಾದ ಕನ್ನಡದಲ್ಲಿ ಬರೆಯಬೇಕಾದ ಅನಿವಾರ್ಯತೆ ಈ ಕವಿಗಳಿಗಿತ್ತು. ಹೀಗಾಗಿ ಪಂಡಿತ ಪರಂಪರೆ ಇಲ್ಲಿ ದೇಸೀಯ ನೆಲೆಗಟ್ಟಿನಿಂದ ಹುಟ್ಟಿಕೊಂಡಿತು. ಇಲ್ಲಿನ ಕವಿಗಳಲ್ಲಿ ಕೆಲವರು ಹಳೆಯ ವ್ಯವಸ್ಥೆಯನ್ನು ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದರಿಂದ ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಪರಂಪರೆಯನ್ನು ಗೌರವಿಸಿ ಒಪ್ಪಿಕೊಳ್ಳುವುದರೊಂದಿಗೆ ಪ್ರಧಾನ ಸಂಸ್ಕøತಿಯಲ್ಲಿ ಆರಾದಿsಸಿದರು. ವಸಾಹತು ಸಂಸ್ಕøತಿಯ ವಿರುದ್ಧ ಪ್ರತಿಭಟಿಸಿದರೂ ಅದು ಒಂದು ಬಗೆಯಲ್ಲಿ ಗುಪ್ತವಾಗಿ ವಿರೋದಿsಸುತ್ತ ಒಲಿಸಿಕೊಳ್ಳುವ ಕ್ರಮದ್ದಾಗಿತ್ತು. ಹೀಗೆ ಏಕಕಾಲದಲ್ಲಿ ಬ್ರಿಟಿಷ್ ಪ್ರಭುತ್ವ ದೇಸೀಯತ್ವದ ನೆಲೆಗಳಲ್ಲಿ ನವೋದಯ ಕಾವ್ಯ ರೂಪುಗೊಂಡಿತು.
ಮಂಗಳೂರು ಕೇಂದ್ರದಲ್ಲಿ ಕ್ರಿಶ್ಚಿಯನ್ ಮಿಷನರಿ ಚಟುವಟಿಕೆಗಳ ಮೂಲಕ ಇಂಗ್ಲಿಷ್ ಭಾಷೆಯು ಕಾವ್ಯವನ್ನು ಪ್ರವೇಶಿಸಿತು. ಹೊಸಗನ್ನಡ ಅರುಣೋದಯ ಕಾಲದಲ್ಲಿ ಕ್ರೈಸ್ತ ಮಿಷನರಿಗಳು ರಚಿಸಿದ ಗೀತ ಸಾಹಿತ್ಯವು ಕನ್ನಡ ಭಾವಗೀತ ಪರಂಪರೆಯ ಬೆಳವಣಿಗೆಗೆ ಪ್ರಮುಖ ಹಾದಿ ಹಾಕಿಕೊಟ್ಟಿತು.
ಕನ್ನಡ ಸಾಂಸ್ಕøತಿಕ ಭೂಮಿಕೆಗೆ ಬಹುದೊಡ್ಡ ಕೊಡುಗೆ ಮಂಗಳೂರು ಕೆಂದ್ರದ ಯಕ್ಷಗಾನ ಪರಂಪರೆ. ಉತ್ತರ ಕರ್ನಾಟಕದ ಕವಿಗಳ ಮೇಲೆ ಶ್ರೀ ಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯಾ, ಬಯಲಾಟದ ಪದ್ಯಗಳು ಬೀರಿದ ಪ್ರಭಾವದಷ್ಟೇ ಇಲ್ಲಿ ಯಕ್ಷಗಾನದ ಪ್ರಭಾವ ವ್ಯಾಪಕವಾಗಿದೆ ಎಂಬುದನ್ನು ವಿವರಿಸಲಾಗಿದೆ.
'ಮಂಗಳೂರು ಮಿತ್ರ ಮಂಡಳಿ' ರೂಪಿತವಾಗಿ ನವೋದಯ ಕಾವ್ಯ ರಚನೆ, ವಿಮರ್ಶೆ, ಅವಲೋಕನ, ಅನುಭಾವಗಳ ವಿನಿಮಯಕ್ಕೆ ಮೊದಲಾದ ಸಂದರ್ಭವನ್ನು ಇಲ್ಲಿ ದಾಖಲಿಸಲಾಗಿದೆ. ಪಂಜೆ, ಗೋವಿಂದ ಪೈ, ಎಂ.ಎನ್. ಕಾಮತ್, ಮುಳಿಯ ತಿಮ್ಮಪ್ಪಯ್ಯ, ಕೊಳಂಬೆ ಪುಟ್ಟಣ್ಣಗೌಡರು, ಕಡೆಂಗೋಡ್ಲು ಶಂಕರಭಟ್ಟ, ಸೇಡಿಯಾಪು ಕೃಷ್ಣಭಟ್ಟ, ಕಯ್ಯಾರ ಕಿಞ್ಞಣ್ಣ ರೈ, ಯರ್ಮುಂಜ ರಾಮಚಂದ್ರ, ಅಮ್ಮೆಂಬಳ ಶಂಕರ ನಾರಾಯಣ ನಾವಡ, ಬಿ.ಎಚ್.ಶ್ರೀಧರ ಮೊದಲಾದವರು ವಸಾಹತುಶಾಹಿ ಎದಿರು ರಾಷ್ಟ್ರೀಯತೆಗೆ ಪೂರಕವಾಗಿ ದೇಸೀಯತೆಯನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದು ಇದಕ್ಕಾಗಿ ಜನಪದ ಕತೆಗಳು, ಪಾಡ್ದನಗಳು, ಜೋಗುಳ ಹಾಡುಗಳು, ಯಕ್ಷಗಾನ ಪದಗಳು ಮೊದಲಾದ ಪ್ರಕಾರಗಳ ಮೂಲಕ ದೇಸೀಯತೆಗೆ ಬಲ ಮತ್ತು ಗೌರವ ತಂದ ಸಂದರ್ಭಗಳನ್ನು ಕಾವ್ಯ ಸಮೇತ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
'ನವೋದಯ: ಧಾರವಾಡ ಕೇಂದ್ರ' ಈ ಉಪಶೀರ್ಷಿಕೆಯಲ್ಲಿ ಜಾನಪದೀಯ ಹಿನ್ನೆಲೆಯ ಕನ್ನಡ ಸತ್ವಯುತ ಕಾವ್ಯದ ಪ್ರಧಾನ ನಿರೂಪಣೆ ಇದೆ. ಧಾರವಾಡದ ಗೆಳೆಯರ ಗುಂಪು ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ಶ್ರದ್ಧಾಪೂರ್ಣ ಕಾಯಕ ಕನ್ನಡಕ್ಕೇ ಹೊಸತಾದುದು. ಗೆಳೆಯರ ಗುಂಪು ಧಾರವಾಡ ಕೇಂದ್ರದ ಸಾಂಸ್ಕøತಿಕ ವ್ಯಾಪ್ತಿಯನ್ನು ಭೌಗೋಳಿಕವಾಗಿಯೂ ಸಾಹಿತ್ಯಿಕವಾಗಿಯೂ ವಿಸ್ತರಿಸಿತು. ಈ ವಿಸ್ತರಣೆಯಲ್ಲಿ ಹೊಸ ಕಾವ್ಯವನ್ನು ಜನಪ್ರಿಯಗೊಳಿಸುವುದರೊಂದಿಗೆ ಜನಪದ ಸತ್ತºದ ಪುನರುಜ್ಜೀವನಕ್ಕೆ ಕನ್ನಡ ನವೋದಯ ಸಂದರ್ಭದಲ್ಲಿ ಪ್ರಧಾನವಾದ ಕೆಲಸ ಮಾಡಿತು.
ಶಾಂತಕವಿಗಳು, ಶ್ರೀಧರ ಖಾನೋಳಕರ, ಕಾವ್ಯಾನಂದ ಪುಣೇಕರ, ಬೇಂದ್ರೆ, ಆನಂದಕಂದ ಮೊದಲಾದ ಕವಿಗಳು ದಿನ ಬಳಕೆಯ ಆಡುಮಾತು, ಜಾನಪದ ಮಟ್ಟುಗಳೊಂದಿಗೆ ಬರೆದುಕೊಂಡು ಬಂದ ಕವನಗಳು ಧಾರವಾಡ ಕೇಂದ್ರವನ್ನು ಜಾನಪದಕ್ಕೆ ಸಜ್ಜುಗೊಳಿಸಿದವು. ಸಾಲಿ ರಾಮಚಂದ್ರರಾಯರು, ವೆಂಕಟರಂಗೋ ಕಟ್ಟಿ, ಶ್ರೀ ಕೃಷ್ಣ ಮಳಗಿ, ವಿ.ಕೃ.ಗೋಕಾಕ, ರಂ.ಶ್ರೀ ಮುಗಳಿ ಮೊದಲಾದವರ ಕಾವ್ಯವನ್ನು ವಿಶ್ಲೇಷಿಸಲಾಗಿದೆ.
ಧಾರವಾಡ ಕೇಂದ್ರದ ಕವಿಗಳು ಕಾವ್ಯದಲ್ಲಿ ಆ ಕಾಲಕ್ಕೆ ಕಾಣಿಸಿಕೊಂಡ ಲಾವಣಿ ಮಟ್ಟುಗಳನ್ನು ಬಳಸಿಕೊಂಡರು. ಜನಪದ ಗೀತೆಗಳಲ್ಲಿನ ಲಯ, ಭಾಷೆ, ನುಡಿಗಟ್ಟುಗಳನ್ನು ಸಮೃದ್ಧವಾಗಿ ತಮ್ಮ ಕಾವ್ಯಕ್ಕೆ ತಂದರು. ಹೊಸ ಕವಿತೆಗೆ ಬೇಕಾದ bsÀಂದೋರೂಪಗಳ ಸಲುವಾಗಿ ಜಾನಪದ ಧಾಟಿಗಳನ್ನು ಅಳವಡಿಸಿಕೊಂಡರು. ಹೀಗಾಗಿ ಜಾನಪದದ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರವು ಹಲಸಂಗಿ ಕೇಂದ್ರದಂತೆ ಒಂದು ಬಹುಮುಖ್ಯವಾದ ಸಾಂಸ್ಕøತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದರ ವಿಸ್ತೃತ ವಿಶ್ಲೇಷಣೆ ಇಲ್ಲಿದೆ.
'ನವೋದಯ: ಹಲಸಂಗಿ ಕೇಂದ್ರ'ವನ್ನು ಈ ಅಧ್ಯಯನದಲ್ಲಿ ಹೊಸದಾಗಿ ಸೃಷ್ಟಿಸಿಕೊಂಡು ಈ ಕೇಂದ್ರವು ನವೋದಯ ಕಾವ್ಯಕ್ಕೆ ಜಾನಪದ ಸತ್ವ, ಸೌಂದರ್ಯ ತುಂಬಿ ಅಪ್ಪಟ ದೇಸೀ ಕವಿತೆಗಳನ್ನು ನೀಡಿದ ಆಧುನಿಕ ಕನ್ನಡ ಕಾವ್ಯದ ಶ್ರೇಷವಿತೆಯನ್ನು ಗುರುತಿಸಲಾಗಿದೆ.
ಹಲಸಂಗಿ ಗೆಳೆಯರು ಹೊಸಗನ್ನಡ ಕಾವ್ಯದ ಪೂವಾರ್ಧದಲ್ಲಿಯೇ ಜನಪದ ಕಾವ್ಯದ ಅನಘ್ರ್ಯ ರತ್ನತ್ರಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಲ್ಲದೆ ಆ ಮೂಲಕ ನೆಲದ ಬದುಕು, ಭಾಷೆ, ಭಾವ, ನಾದ ಆಡುನುಡಿಯ ಮೋಡಿಗಳಿಗಾಗಿ ಪರಿತಪಿಸುತ್ತಿದ್ದ ಕನ್ನಡ ಶಿಷ್ಟ ಕಾವ್ಯದ ಹೊಸತನಕ್ಕೆ ಹೊಸ ರಕ್ತ ಮಾಂಸಕೊಟ್ಟ ಶ್ರೇಯಸ್ಸಿಗೂ ಕಾರಣರಾದರು. ಹಲಸಂಗಿ ಎಂದರೆ ಕರ್ನಾಟಕದಲ್ಲಿ ಜಾನಪದದ 'ಮಕ್ಕಾ' ಎಂಬಷ್ಟು ಪ್ರಸಿದ್ದಿಯಾಯಿತು. (ಸೋಮಶೇಖರ ಇಮ್ರಾಪುರ, ಜಾನಪದ ಆಲೋಕನ, 2002) ಹಲಸಂಗಿ ಹಲವು ಸಂಸ್ಕøತಿಗಳ ಸಂಗಮ ಸ್ಥಾನ. ಸೂಪಿsೀ, ಮರಾಠಿ ಭಕ್ತಿ ಕಾವ್ಯ ವಚನ ಸಾಹಿತ್ಯ ಹಾಗೂ ಹಲಸಂಗಿ ಜಾನಪದ ಹೀಗೆ ಕನ್ನಡಕ್ಕೆ ಇದು ಈ ಎಲ್ಲದರ ಶ್ರೇಷವಿತೆಯನ್ನು ಜಾನಪದ ಮೂಲವಾಗಿ ತಂದಿದೆ. ಸಿದ್ದಯ್ಯ ಪುರಾಣಿಕರು ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯುವವರು ಹಲಸಂಗಿಯ ಹೆಸರನ್ನು ಮರೆಯುವಂತಿಲ್ಲ. ಕನ್ನಡ ನುಡಿಯ ನವೋದಯಕ್ಕೆ ಕಾರಣವಾದ ಕೆಲವೇ ಕೇಂದ್ರಗಳಲ್ಲಿ ಅದೊಂದು ಎಂದಿದ್ದಾರೆ.
ಜಿ.ಎಸ್.ಶಿವರುದ್ರಪ್ಪನವರು 'ನವೋದಯದ ಮೂರು ಕೇಂದ್ರಗಳ ಜೊತೆಗೆ ಮಧುರಚೆನ್ನರ ಗೆಳೆಯರ ಬಳಗದ ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ.ಧೂಲಾ ಇವರನ್ನು ಒಳಗೊಂಡ ಹಲಸಂಗಿಯನ್ನು ನವೋದಯದ ನಾಲ್ಕನೆಯ ಕೇಂದ್ರವೆಂದು ಪರಿಗಣಿಸುವುದು ಅಗತ್ಯವಾಗಿದೆ' (ಜಿ.ಎಸ್.ಶಿವರುದ್ರಪ್ಪ, 2003) ಎಂದಿದ್ದಾರೆ. ಈ ನಾಲ್ಕನೆಯ ಕೇಂದ್ರ ಕನ್ನಡ ನವೋದಯಕ್ಕೆ ಅನುಭಾವ ಕಾವ್ಯಧಾರೆಯೊಂದನ್ನು ಸೇರಿಸಿದ್ದಲ್ಲದೆ ಜಾನಪದ ಜೀವಸತ್ವವನ್ನು ತುಂಬುವ ಜನಪದ ಸಾಹಿತ್ಯ ಸಂಗ್ರಹ ಹಾಗೂ ಆ ಕುರಿತ ಅಧ್ಯಯನವನ್ನು ಕನ್ನಡದ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಮಾಡಿತು. ಹೀಗಾಗಿ ನವೋದಯ ಕುರಿತು ಈ ಹೊತ್ತು ವಿಚಾರ ಮಾಡುವ ಈ ಸಂದರ್ಭದಲ್ಲಿ ಅದರ ಬಹುಮುಖತ್ವವನ್ನು ಇಲ್ಲಿ ಮೊದಲ ಬಾರಿಗೆ ವಿಸ್ತೃತವಾಗಿ ಕಟ್ಟಿಕೊಡಲಾಗಿದೆ. ಹಲಸಂಗಿ ಗೆಳೆಯರ ಗುಂಪು ಧಾರವಾಡ ಗೆಳೆಯರ ಗುಂಪಿನಿಂದ ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳುವ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ. ಹಲಸಂಗಿ ಗೆಳೆಯರು ಕೈಕೊಂಡ ಜಾನಪದ ಸಾಹಿತ್ಯ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯದ ಮಹತ್ವ ಸಾರಲಾಗಿದೆ. ಹಲಸಂಗಿಯ ಜಾನಪದ ಪರಿಸರ, ಖಾಜಾಬಾಯಿಯ ಲಾವಣಿಗಳ ಮೋಡಿ, ಹಲಸಂಗಿ ಕಡೆಗೆ ಆಕರ್ಷಿತರಾದ ಗಣ್ಯ ಕವಿಗಳ ಸದಾಶಯಗಳನ್ನು ದಾಖಲಿಸಲಾಗಿದೆ.
ಹಲಸಂಗಿ ಗೆಳೆಯರು ಸಂಪಾದಿಸಿದ 'ಗರತಿಯ ಹಾಡು' ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಇದಕ್ಕೆ ಪ್ರಸ್ತಾವನೆ ಬರೆದ ಬಿ.ಎಂ.ಶ್ರೀ ಅವರು 'ಮೊದಲು ಹುಟ್ಟಿದುದು ಜನವಾಣಿ. ಅದು ಬೆಳೆದು ಪರಿಷ್ಕøತವಾಗಿ ವೃದ್ಧಿಯಾದುದು ಕವಿವಾಣಿ. ''ಜನವಾಣಿ ಬೇರು, ಕವಿವಾಣಿ ಹೂವು' ಎಂದು ಸಾರಿದರು. 'ಗರತಿಯ ಹಾಡು' ಸಂಕಲನದ ಪರಿಚಯದಲ್ಲಿ ಬೇಂದ್ರೆಯವರು 'ಗರತಿಯರ ಹಾಡುಗಳೇ ನಿಜವಾದ ಕಾವ್ಯ, ಉಳಿದದು ಕಾವ್ಯ bsÁಯೆ' ಎಂದಿದ್ದಾರೆ. ಡಾ.ಗುರುಲಿಂಗ ಕಾಪಸೆ ಅವರು ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವಿತೀಯವಾದ ಸಂಗ್ರಹವೂ ಅಹುದು ಎಂದಿದ್ದಾರೆ. ಜೊತೆಗೆ ಕಾಪಸೆ ರೇವಪ್ಪನವರು ಸಂಪಾದಿಸಿದ 'ಮಲ್ಲಿಗೆ ದಂಡೆ' ಜನಪದ ಹಬ್ಬ, ಆಚರಣೆಗಳ ಸಾಂದಬಿರ್sಕ ಹಾಡುಗಳ ಕೃತಿ ನವೋದಯ ಕಾವ್ಯಕ್ಕೆ ನೀಡಿದ ಪ್ರೇರಣೆ, ಪ್ರಭಾವಗಳನ್ನು ಅವುಗಳ ವಿಶಿಷ್ಟ ಜಾನಪದೀಯ ನೆಲೆಯಲ್ಲಿ ತುಂಬಾ ಮೌಲಿಕವಾಗಿ ವಿಶ್ಲೇಷಿಸಲಾಗಿದೆ.
ಅಧ್ಯಾಯ 6 ರಲ್ಲಿ 'ಮುಖ್ಯ ಕವಿಗಳ ಕಾವ್ಯ ಚರ್ಚೆ'ಯನ್ನು ಕೈಕೊಳ್ಳಲಾಗಿದೆ. ಬೇಂದ್ರೆ, ಮಧುರಚೆನ್ನ ಹಾಗೂ ಆನಂದಕಂದ ಅವರ ಕಾವ್ಯದ ಜಾನಪದದ ಹಿನ್ನಲೆ, ವಸ್ತು ಆಕೃತಿಗಳ ವಿಶ್ಲೇಷಣೆ ಮಾಡಲಾಗಿದೆ.
ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕೆಯ ಕಾಳು
ಮುತ್ತುರತುನವ ಬಿತ್ತಿ ಮಾಡದಿರು ಹೊಲಹಾಳು
ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ
ದೇವನುಡಿ ನುಡಿವಂತೆ ಮಾಡುಮೆಚ್ಚಿ
- ಅಂಬಿಕಾತನಯದತ್ತ (1932)
ಬೇಂದ್ರೆಯವರ ಕಾವ್ಯ ಧೋರಣೆ ಜಾನಪದೀಯವಾದುದರ ಪ್ರತೀಕವಾಗಿ ಈ ಸಾಲುಗಳನ್ನು ಉಲ್ಲೇಖಿಸಲಾಗಿದೆ. ಬೇಂದ್ರೆಯವರ ಕವಿತೆಗಳಲ್ಲಿರುವ ಆಡುಮಾತಿನ ಲಯ, ಶಬ್ದ ಸಂಪತ್ತು, ಪ್ರತಿಮೆ, ಪಡೆನುಡಿ, ಗಾದೆ, ಧ್ವನಿಶಕ್ತಿ, ಭಾಷೆ, bsÀಂದಸ್ಸು ಎಲ್ಲವೂ ಜನಪದರಿಂದಲೇ ಎತ್ತಿಕೊಂಡಿರುವುದರಿಂದ ಇವು ಬೇಂದ್ರೆ ಗೀತೆಗಳು ಎನ್ನುವುದನ್ನು ಮರೆಯಿಸಿ ಜನಪದ ವಲಯಕ್ಕೆ ಸೇರುತ್ತವೆ. ತುಂಬಾ ವ್ಯಾಪಕವಾಗಿ ಇಲ್ಲಿ ಬೇಂದ್ರೆಯವರ ಕಾವ್ಯದ ಮೇಲೆ ಬೀರಿದ ಜಾನಪದದ ಪ್ರಭಾವವನ್ನು ನಾಲ್ಕು ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆ. 1. ಮುಕ್ತತೆ ತೋರಿದ ಜಾನಪದ 2. ಗರತಿಯ ಹಾಡೆಂಬ ಜನಪದ ವೇದ 3. ಅಂಬಿಕಾತನಯ ಕಟ್ಟಿದ ಕಗ್ಗಾ ಹಾಗೂ 4. ತೊಳೆಯದ, ಬಾಚದ ಶಬ್ದಗಳ ಕಾವ್ಯಶಿಲ್ಪ ಹೀಗೆ ನಾಲ್ಕು ನೆಲೆಯಲ್ಲಿ ಬೇಂದ್ರೆಯವರ ಕವಿತೆಗಳ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಬೇಂದ್ರೆಯವರ ಕಾವ್ಯದ ಮೇಲಾದ ಜಾನಪದದ ದಟ್ಟವಾದ ಪ್ರಭಾವವನ್ನು ಕಾವ್ಯ ಮತ್ತು ಪರಿಸರದ ಹಿನ್ನೆಲೆಯಲ್ಲಿ ದಾಖಲಿಸಲಾಗಿದೆ.
'ಮಧುರಚೆನ್ನರ ಕಾವ್ಯ' ಶೀರ್ಷಿಕೆಯಲ್ಲಿ ಜನಪದ ಸಾಹಿತ್ಯ ಸಂಗ್ರಹ, ಸಂಪಾದನೆಯ ಜೊತೆಗೆ ಸ್ವತಂತ್ರ ಕವಿತೆಗಳನ್ನು ಬರೆದು ಹೆಸರಾದ ಮಧುರಚೆನ್ನರು ನವೋದಯ ಕಾವ್ಯದ ಆರಂಭಕ್ಕೆ ಕನ್ನಡ ಜಾನಪದದ ಬಹುದಟ್ಟವಾದ ಸ್ಪರ್ಶ ನೀಡಿದ್ದನ್ನು ಶೋದಿsಸಲಾಗಿದೆ. ಮಧುರ ಚೆನ್ನರ ಕಾವ್ಯ, ಭಾಷೆ, ಶೈಲಿ, ಚಿತ್ರ, ಚೆಲುವು, ಅನಿಸಿಕೆ, ನೆನಸಿಕೆ, ರೂಪಕ, ಪ್ರತಿಮೆ, ಧಾಟಿ, ಧೋರಣೆ ಎಲ್ಲವೂ ಜನಪದ ಕಾವ್ಯದ ಒನಪಿನಿಂದ ಕೂಡಿವೆ (ಚೆನ್ನವೀರ ಕಣವಿ, ಸಾಹಿತ್ಯ ಚಿಂತನ, ಪುಟ 83) ಎಂಬ ಅಂಶಗಳನ್ನು ಇಲ್ಲಿ ಮಧುರಚೆನ್ನರ ಕಾವ್ಯವನ್ನು ಉದಾಹರಿಸುತ್ತಾ ಜಾನಪದದ ಪ್ರಭಾವವನ್ನು ಗುರುತಿಸಲಾಗಿದೆ.
ಮಧುರಚೆನ್ನರ ಏಕೈಕ ಕಾವ್ಯಕೃತಿ 'ನನ್ನ ನಲ್ಲ' (1933) ಕನ್ನಡ ನವೋದಯ ಕಾವ್ಯದ ಆದ್ಯ ಕೃತಿ ಎನ್ನಿಸಿಕೊಳ್ಳುತ್ತದೆ. ಜಿ.ಎಸ್.ಶಿವರುದ್ರಪ್ಪನವರು ಗುರುತಿಸುವಂತೆ ಬೇಂದ್ರೆ, ಪು.ತಿ.ನ, ಪೈ, ಕುವೆಂಪು, (1930ರಿಂದ 1933ರ ಅವದಿsಯಲ್ಲಿ ಪ್ರಕಟವಾದ) ಅವರ ಮೊದಲ ಸಂಕಲನಗಳಿಗೂ ಮಧುರಚೆನ್ನ 'ನನ್ನ ನಲ್ಲ' ಎಂಬ ಮೊದಲಿನ ಸಂಕಲನಕ್ಕೂ ಮೌಲಿಕವಾದ ವ್ಯತ್ಯಾಸವಿದೆ. ಅದೆಂದರೆ, ಕುವೆಂಪು, ಬೇಂದ್ರೆ, ಪೈ, ಪು.ತಿ.ನ ಅವರ ಮೊದಲ ಸಂಕಲನಗಳು ಅವರವರ ಕಾವ್ಯವು ಮುಂದೆ ಮೈ ತಳೆದ ಅವರ ಕಾವ್ಯ ಸತ್ವದ ಕೆಲವು ಲಕ್ಷಣಗಳ ಹಾಗೂ ಆಶಯಗಳ 'ಬೀಜ' ರೂಪದಂತಿದೆ ಎನ್ನುವುದಾದರೆ ಮಧುರಚೆನ್ನರ 'ನನ್ನ ನಲ್ಲ' ಅವರ ಕಾವ್ಯದ ಮೊದಲೂ ಆಗಿದೆ, ತುದಿಯೂ ಆಗಿದೆ; ಬೀಜವೂ ಆಗಿದೆ, ಹಣ್ಣೂ ಆಗಿದೆ. (ಜಿ.ಎಸ್. ಶಿವರುದ್ರಪ್ಪ, ಮಧುರಚೆನ್ನರ ಮಾರ್ಗ, 2003) ಎಂಬುದು ಅವರ ಕಾವ್ಯವು ನವೋದಯ ಕಾವ್ಯದ ಹೊಸ ಸಾಧ್ಯತೆಗಳನ್ನು ತೆರೆದು ತೋರಿದ ಮೊದಲ ಕೃತಿಯಾಗುತ್ತದೆ.
'ಅಚ್ಚ ಅನುಭವ ರಾಶಿಯನ್ನೂ ಜಾನಪದದ ಮೂಲಕ ಬಿಚ್ಚಿ ಬಯಲಿಗೆ ಇಟ್ಟಿರುವ ಮಧುರಚೆನ್ನರ ಕಾವ್ಯದ ಮೇಲೆ ಜಾನಪದದ ಪ್ರಭಾವವನ್ನು 1. ಅನುಭಾವಿ ಕವಿಗಳ ಅಬಿsವ್ಯಕ್ತಿ ಮತ್ತು ಜಾನಪದ 2. 'ನನ್ನ ನಲ್ಲ' ಜಾನಪದದ ಹೊಸ ಸಾಧ್ಯತೆ 3. ನಿರಂತರ ಜಾನಪದ : ಮುಗಿಯದ ಹಾಡು 4. ನವೋದಯ ಕಾವ್ಯ: ಜಾನಪದದ ನೆಲೆ ಈ ಉಪಶೀರ್ಷಿಕೆಯಲ್ಲಿ ಕಾವ್ಯಭಾಗಗಳೊಂದಿಗೆ ಗುರುತಿಸಲಾಗಿದೆ.
'ಆನಂದಕಂದರ ಕಾವ್ಯ' ಕುರಿತು ಬರೆದ ಶೀರ್ಷಿಕೆಯ ಬರಹದಲ್ಲಿ ಬೆಟಗೇರಿ ಕೃಷ್ಣಶರ್ಮರ ಕಾವ್ಯದ ಮೇಲೆ ಜಾನಪದದ ಗಾಢವಾದ ಪ್ರಭಾವವನ್ನು ಶೋದಿsಸಲಾಗಿದೆ.
ಕೇಳಿಲ್ಲೇನS ಲಾವಣಿ ಗೀಗಿ ಹಾಡ
ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ
- ಆನಂದಕಂದ (ನಲ್ವಾಡುಗಳು)
ಜಾನಪದವನ್ನು ಅದರ ಮೂಲಸತ್ವ ಸೌಂದರ್ಯದೊಂದಿಗೆ ತಮ್ಮ ಕಾವ್ಯದಲ್ಲಿ ಕಂಡರಿಸಿದ ಆನಂದಕಂದರು ಜನಪದರ ಬದುಕನ್ನು ಅವರ ಮಾತು, ನಡತೆ, ಆದರ್ಶದೊಂದಿಗೆ ರೂಪಿಸಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಬೆಳವಲ ನಾಡಿನ ಜನರ ಆಡುನುಡಿಯ ಸಹಜತೆ, ಬದುಕಿನ ರೀತಿ, ಗ್ರಾಮ ಸಂಸ್ಕøತಿಯ ತಿಳಿ ಜೀವನ, ರಸಿಕತೆ ಎಲ್ಲವನ್ನು ಜನಪದರೇ ಆಡಿ ತೋರಿಸುವಂತೆ ಕಟ್ಟಿಕೊಟ್ಟಿದ್ದಾರೆ.
'ಆನಂದಕಂದ'ರ ಕಾವ್ಯದ ಜಾನಪದದ ಪ್ರಭಾವವನ್ನು 1. ಗ್ರಾಮ ಸಂಸ್ಕೃತಿಯ ಜಾನಪದೀಯ ಹಿನ್ನೆಲೆ, 2. 'ಹಳ್ಳಿಗರ ಹಾಡುಗಳು': ಜಾನಪದ ಕಾಯಕ 3. ಜನಪದ ಕಾವ್ಯ ಪರಿಸರದ ಅನಾವರಣ ಹಾಗೂ 4. 'ನಲ್ವಾಡುಗಳು': ಜಾನಪದದ ಸಮೃದ್ಧತೆ ಈ ಉಪ ಶೀರ್ಷಿಕೆಯಲ್ಲಿ ವಿಶ್ಲೇಷಿಸಲಾಗಿದೆ.
ಅಧ್ಯಾಯ 7 ರಲ್ಲಿ “ನವೋದಯ ಕಾವ್ಯದ ಭಾಷೆ, ಪದ, ನುಡಿಗಟ್ಟುಗಳ ಸ್ವೋಪಜ್ಞತೆ”ಯನ್ನು ಗುರುತಿಸಿ ವಿವರಿಸಲಾಗಿದೆ. ನವೋದಯ ಕಾವ್ಯದ ಭಾಷೆಗೆ ರಚನಾ ಕಾಲದ ಬಳಕೆಯ ಆಡುನುಡಿಗಳು ಸಮೃದ್ಧತೆಯನ್ನು ತುಂಬಿವೆ. ಆಯಾ ಕಾಲದ ಕವಿ ತನ್ನ ಪರಿಸರ ಭಾಷೆಯನ್ನು ಕಾವ್ಯಕ್ಕೆ ತರುವಾಗ ತನ್ನದೇ ವಿಶಿಷ್ಟತೆಯನ್ನು ತೋರುತ್ತಾರೆ. ಎಲ್ಲ ಕಾಲದಲ್ಲೂ ಭಾಷೆಯನ್ನು ಮುರಿದು ಕಟ್ಟುವ, ಕಟ್ಟಿ ಮುರಿಯುವ ಪ್ರಯತ್ನಗಳು ನಡದೇ ಇವೆ. ಪ್ರತಿಯೊಬ್ಬ ನಿಜವಾದ ಕವಿಯೂ ತನ್ನ ಕಾಲದ ಅವಶ್ಯಕತೆಗೆ ಅನುಗುಣವಾಗಿ ಭಾಷೆಯನ್ನು ರೂಪಿಸಿಕೊಳ್ಳುತ್ತಾರೆ. ಹೀಗೆ ರೂಪಿಸುವಲ್ಲಿ, ಎಲ್ಲ ಕಾಲದ ನಿಜವಾದ ಕವಿಗಳ ಧೋರಣೆ, ಕಾವ್ಯದ ಭಾಷೆ ಆಡುನುಡಿಗೆ ಸಮೀಪವಾಗಿರಬೇಕು. ಕಾವ್ಯಕ್ಕೆ ಆಡುಮಾತಿನ ಸತ್ವವನ್ನು ತುಂಬಬೇಕು ಎನ್ನುವುದು ನವೋದಯ ಕಾವ್ಯ ಸಂದರ್ಭದಲ್ಲಿ ಅದರ ರಚನೆಗಳು ವ್ಯಕ್ತ ಪಡಿಸಿದವು.
ಎ.ವಿ.ನಾವಡ ಅವರು ಪ್ರಸ್ತಾಪಿಸಿರುವಂತೆ “ಕಾವ್ಯಕ್ಕೆ ಆಡುಮಾತಿನ ಗತಿ, ಕಾಕುದನಿ, ಏರ್ಪಟ್ಟಾಗ ಸಂವಹನಶೀಲತೆ ಹೆಚ್ಚುತ್ತದೆ. ಸಮಷ್ಟಿಯಲ್ಲಿನ 'ತೊಳೆಯದ ಬಾಚದ' ಶಬ್ದಗಳನ್ನು ಅನಾಮತ್ತಾಗಿ ಎತ್ತಿ ಕಾವ್ಯದಲ್ಲಿ ಬಳಸಿದೊಡನೆ ದೇಸೀ ಶೈಲಿ ಏರ್ಪಟ್ಟಿತ್ತೆಂದು ತಿಳಿಯುವುದು ಸರಿಯಲ್ಲ” ಜನ ಬಳಕೆಯ ಪದಗಳನ್ನು ಬಳಸಿ ವಾಚ್ಯಾರ್ಥಕ್ಕೆ ಮೀರಿದ ಅರ್ಥಕ್ಕಾಗಿ ಅವುಗಳನ್ನು ದುಡಿಸಿಕೊಂಡಾಗಲೇ ಕವಿಯ ಯಶಸ್ಸು” (ಕನ್ನಡ ವಿಮರ್ಶೆಯ ಮೊದಲ ಹೆಜ್ಜೆಗಳು, 1992) ಎಂಬ ಸಮೀಕರಣದ ಹಿನ್ನೆಲೆಯಲ್ಲಿ ಇಲ್ಲಿ ಜನ ಬಳಕೆಯ ಭಾಷೆಯನ್ನು ನವೋದಯ ಕವಿಗಳು ಬಳಸಿದ ಬಗ್ಗೆ ವಿಶ್ಲೇಷಿಸಲಾಗಿದೆ.
ಜಾನಪದದ ಪದ, ನುಡಿಗಟ್ಟು, ನಾಣ್ನುಡಿಗಳನ್ನು ವ್ಯಾಪಕವಾಗಿ ತಮ್ಮ ಕಾವ್ಯದಲ್ಲಿ ಬಳಸಿಕೊಂಡ ಬೇಂದ್ರೆ, ಮಧುರಚೆನ್ನ, ಆನಂದಕಂದರ ಕಾವ್ಯ ಸಂದರ್ಭಗಳನ್ನು ಕಟ್ಟಿಕೊಡಲಾಗಿದೆ. ಇಲ್ಲಿ 1. ಜನಪದ ಭಾಷೆ ಮತ್ತು ಶಿಷ್ಟ ಪ್ರe್ಞÉಯ ಎಚ್ಚರ 2. ಆಡುಮಾತಿನ ಧಾಟಿ ಮತ್ತು ಸಂವಹನ ಶೀಲತೆ 3. ವ್ಯಕ್ತಿನಿಷ್ಟ ಕೃತಿನಿಷ್ಟ ಸೋಪಜ್ಞತೆ ಹಾಗೂ 4. ಪದ, ನುಡಿಗಟ್ಟುಗಳ ಕಾವ್ಯಾಬಿsವ್ಯಕ್ತಿಯ ವಿಶಿಷ್ಟತೆ ಈ ಉಪಶೀರ್ಷಿಕೆಯಲ್ಲಿ ವಿವೇಚಿಸಲಾಗಿದೆ.
ಒಟ್ಟಾರೆ, ನವೋದಯ ಕವಿಗಳು ಆಡು ನುಡಿಯನ್ನು ಜನಪದ ಸಾಹಿತ್ಯದ ರೀತಿ ನೀತಿಗಳನ್ನು ತಮ್ಮ ವಿಶಿಷ್ಟ ಸಂವೇದನೆಯ ಅಬಿsವ್ಯಕ್ತಿಗಾಗಿ ತಮ್ಮದಾಗಿಸಿಕೊಂಡು ರಚಿಸಿದ ಕಾವ್ಯ ಕನ್ನಡ ನವೋದಯ ಕಾವ್ಯದಲ್ಲಿ ಅಪೂರ್ವವಾಗಿಯೇ ಕಾಣಿಸಿಕೊಂಡಿತು. ಕಾವ್ಯ ಭಾಷೆಯನ್ನು ಕೃತಕವಾಗಿ ಬಿಡುವ ಅಪಾಯದಿಂದ ಪಾರುಮಾಡಿ ಆಡುಮಾತಿನ ಅರ್ಥ ಪ್ರತೀತಿ, ಚಿತ್ರ ನಿರ್ಮಾಣ ಶಕ್ತಿ, ಅಂತಃಕರಣದ ಒಲುಮೆಯಿಂದ ಬದುಕಿನ ಹೊಸ ಸಾಧ್ಯತೆಗಳ ಅರಿವನ್ನು ಹೆಚ್ಚಿಸಿದ ಜಾನಪದ ಪ್ರಭಾವಿತ ನವೋದಯ ಕಾವ್ಯ ಕನ್ನಡದ ಆಧುನಿಕ ಕಾವ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
ಅಧ್ಯಾಯ 8 ಸಮಾರೋಪ : ಇದರಲ್ಲಿ ಅಧ್ಯಯನದ ಫಲಿತಗಳನ್ನು ನಿರೂಪಿಸುವುದರೊಂದಿಗೆ ಮುಂದೆ ನಡೆಯಬೇಕಾದ ಅಧ್ಯಯನಗಳ ಅಗತ್ಯಗಳನ್ನು ಸೂಚಿಸಲಾಗಿದೆ. ಆಧುನಿಕ ಪ್ರe್ಞÉಯುಳ್ಳ ಯಾವ ಕವಿಯೂ ಜನಪದ ಕಾವ್ಯ ಪರಂಪರೆಯನ್ನು ಬಿಟ್ಟು ಬರೆಯುವುದು ಸಾಧ್ಯವಿಲ್ಲ ಎಂಬುದನ್ನು ಸಾದಿsಸಲು ಅಧ್ಯಯನದಲ್ಲಿ ವಿಸ್ತೃತವಾಗಿಯೆ ಚರ್ಚಿಸಲಾಗಿದೆ.
ಬಿ.ಎಂ.ಶ್ರೀ ಅವರನ್ನು ಈ ಹೊತ್ತಿಗೂ ನವೋದಯ ಕಾವ್ಯದ ಅಧ್ವರ್ಯು ಎಂಬ ಗೃಹೀತದಿಂದಲೇ ವಿಶ್ಲೇಷಣೆ ಮಾಡುತ್ತಿರುವುದನ್ನು ಬದಿಗಿಟ್ಟು ಹತ್ತೊಂಬತ್ತನೆಯ ಶತಮಾನದಿಂದಲೇ ಈ ದಿಕ್ಕಿನಲ್ಲಿ ತೊಡಗಿಕೊಂಡ ಹಲವಾರು ಕವಿಗಳನ್ನು ಮೊದಲ ಬಾರಿಗೆ ಇಲ್ಲಿ ಒಂದೆಡೆ ತಂದು ಅವರ ಕಾವ್ಯಸಿದ್ದಿಯನ್ನು ಪ್ರಕಟಪಡಿಸಿ 'ಅಕೆಡೆಮಿಕ್' ಆದ ಮನೋಧರ್ಮದಿಂದ ರೂಪುಗೊಂಡ ಕಾವ್ಯದಿಂದಲೇ 'ಆಧುನಿಕ ಕನ್ನಡ ಕಾವ್ಯದ ಹೆಬ್ಬಾಗಿಲು' ತೆರೆಯಿತೆಂಬ ವಾದವನ್ನು ಅಲ್ಲಗಳೆದು ನವೋದಯ ಆರಂಭದ ಕನ್ನಡ ಕಾವ್ಯದ ಕೃಷಿಕಾರರು ಜಾನಪದ ಸತ್ವವನ್ನು ಮೈಗೂಡಿಸಿಕೊಂಡ ಲಾವಣಿಕಾರರು, ತತ್ತ್ವಪದಕಾರರು ಹಾಗೂ ಈ ಬಗೆಯ ರಚನಾಕಾರರು ಎಂಬುದನ್ನು ಈ ಅಧ್ಯಯನವು ಸಾದಿsಸಿ ತೋರಿಸಿದೆ.
ನವೋದಯ ಕಾವ್ಯ ಭಾಷೆಯ ಅಪೂರ್ವ ಹದವೆಲ್ಲ ಸಂಪೂರ್ಣ ಹಣ್ಣಾದ ಸಂದರ್ಭದಲ್ಲಿ ಉದಿಸಿದ ಕನ್ನಡ ನವ್ಯ ಕಾವ್ಯವೂ ಜಾನಪದ ಪ್ರಭಾವ ಮುಂದುವರೆಸಿಕೊಂಡು ಬಂದಿತು. ಜಾನಪದದಿಂದ ನವ್ಯಕ್ಕೆ ಹೊಸತನ ತಂದುಕೊಟ್ಟ ಚಂದ್ರಶೇಖರ ಕಂಬಾರ, ಚೆನ್ನವೀರ ಕಣವಿ, ಸೋಮಶೇಖರ ಇಮ್ರಾಪುರ, ಚೆನ್ನಣ್ಣ ವಾಲೀಕಾರ ಮೊದಲಾದವರು ಉತ್ತರ ಕರ್ನಾಟಕದ ಜನಪದ ಭಾಷೆಯನ್ನೇ ಅಮೂಲಾಗ್ರ ಕಾವ್ಯ ಮಾಧ್ಯಮವೆಂದು ಸ್ವೀಕರಿಸಿ ಆ ಭಾಷೆಯನ್ನು ಹೊಸ ಸಂವೇದನೆಗಳಿಗೆ ಬಳಸಿಕೊಳ್ಳುವ ಪ್ರಯತ್ನದಲ್ಲಿ ಶಕ್ತಿಯುತ ಭಾಷೆ ಹಾಗೂ ಕಾವ್ಯದ ಲಯ, ಗತ್ತು, ಗಮ್ಮತ್ತುಗಳಲ್ಲಿ ವೈವಿಧ್ಯತೆ ತಂದು ಹೊಸಕಾವ್ಯ ಮಾರ್ಗವನ್ನು ಹಾಕಿಕೊಟ್ಟರು. ಹಾಗಾಗಿ ಈ ಕವಿಗಳ ಒಂದು ಪ್ರತ್ಯೇಕ ಅಧ್ಯಯನವೇ ಜಾನಪದದ ಪ್ರಭಾವದ ಹಿನ್ನೆಲೆಯಲ್ಲಿ ನಡೆಯಬೇಕಾದ ಅಗತ್ಯವನ್ನು ಈ ಅಧ್ಯಯನವು ಸೂಚಿಸಿಕೊಟ್ಟಿದೆ.
ಸಾಂಸ್ಕøತಿಕ ಬದಲಾವಣೆಗಾಗಿ ಕಾವ್ಯ ಪರಿಣಾಮಕಾರೀ ಸಾಧನವಾಗಬೇಕೆಂದೂ ಬದುಕಿನ ಬಗ್ಗೆ ಅಪಾರ ಪ್ರೀತಿ ಮತ್ತು ನಿಷೆವಿಯಿಂದ ಕೂಡಿದ ಸಾಹಿತ್ಯ ಬೇಕೆಂದೂ ಬಯಸುತ್ತಿರುವ ದಲಿತ ಮತ್ತು ಬಂಡಾಯದ ಕವಿಗಳು ಜಾನಪದಕ್ಕೆ ಅಗ್ರ ಪ್ರಾಶಸ್ತ್ಯ ನೀಡಿರುವುದಲ್ಲದೆ ಜಾನಪದ ಸತ್ವ ಮೈಗೂಡಿಸಿಕೊಂಡೇ ಕೃತಿ ರಚನೆ ಮಾಡುತ್ತಿದ್ದಾರೆ. ಹೀಗೆ ಇಂದಿಗೂ ರಚನೆಯಾಗುತ್ತಿರುವ ನಮ್ಮ ಎಲ್ಲ ಕಾವ್ಯ ಸಂಪ್ರದಾಯಗಳು ಜಾನಪದ ಸತ್ವದಿಂದ ಕಸುವನ್ನು, ಜೀವ ಕಳೆಯನ್ನು ಪಡೆದಿರುವುದು ಸ್ಪಷ್ಟವಾಗಿದೆ.
ಹೀಗೆ ನವೋದಯ ಕಾವ್ಯವನ್ನು ಕೇಂದ್ರವಾಗಿರಿಸಿಕೊಂಡು ಈ ಅಧ್ಯಯನ ನಡೆದಿದೆಯಾದರೂ ಇದೇ ನೆಲೆಯಲ್ಲಿ ಕನ್ನಡ ಕಾವ್ಯದ ಪ್ರಮುಖ ಘಟ್ಟಗಳ ಸಾಹಿತ್ಯದ ವಿವಿಧ ಪ್ರಕಾರಗಳ ಜಾನಪದ ಹಿನ್ನೆಲೆಯ ಅಧ್ಯಯನಗಳು ನಡೆಯಬೇಕೆಂಬುದು ಈ ಸಂಶೋಧಕನ ನಮ್ರ ಆಶಯವಾಗಿದೆ.
ಪ್ರಸ್ತುತ ಅಧ್ಯಯನವು ಈ ಮುಂದಿನ ಅಧ್ಯಾಯಗಳನ್ನು ಒಳಗೊಂಡಿರುತ್ತದೆ.
ಪರಿವಿಡಿ
ಅಧ್ಯಾಯ 1
1-6
ಅಧ್ಯಯನದ ಉದ್ದೇಶ, ಸ್ವರೂಪ ಹಾಗೂ ವ್ಯಾಪ್ತಿ
ಅಧ್ಯಾಯ 2
7-35
ನವೋದಯ ಕಾವ್ಯ : ಜನಪದ ಮಿತಿ ಹಾಗೂ ಶಕ್ತಿ
2. 1.
ವಸಾಹತು ಕಾಲ ಮತ್ತು ದೇಸೀ ಪ್ರe್ಞÉಯ ವಿಸ್ಮ್ನೃತಿ
2. 2.
ಸ್ಥಗಿತಗೊಂಡ ಕಾಲ ಮತ್ತು ಉಪೇಕ್ಷಿತ ಕಾವ್ಯ
2. 3.
ಕನ್ನಡದ ಅಸ್ತಿತ್ವದ ಅರಿವು ಮತ್ತು ಜನಪದ ಪ್ರe್ಞÉ
2. 4.
ಶಿಷ್ಟತೆಯ ಕೋಟೆ, ದೇಸೀಯತೆಯ ಬಯಲು
2. 5.
ಬದಲಾದ ಕಾವ್ಯ ಧೋರಣೆ ಮತ್ತು ಜಾನಪದ
ಅಧ್ಯಾಯ 3
36-67
ನವೋದಯ ಕಾವ್ಯ : ಜನಪದ ಸಂವೇದನೆ ಹಾಗೂ ಸಮಕಾಲೀನ ಜೀವನ ಪ್ರe್ಞÉ
3. 1.
ಆಧುನಿಕ ಮನಸ್ಸು ಮತ್ತು ಜನಪದ ಸಂವೇದನೆ
3. 2.
ಮೌಖಿಕ ಸಂವಹನ ಮತ್ತು ಲಿಖಿತ ಪಾಠ
3. 3.
ಜನಪದ ಕಾವ್ಯ : ಸಮಕಾಲೀನ ಆಶಯಗಳು
3. 4.
ಕಾವ್ಯವಸ್ತು : ನವೋದಯ ಮತ್ತು ಜಾನಪದ
3. 5.
ಕನ್ನಡ ಶಿಷ್ಟಕಾವ್ಯದಲ್ಲಿ ದೇಸೀ ಕವಿತ್ವ
ಅಧ್ಯಾಯ 4
68-98
ನವೋದಯ ಕಾವ್ಯ : ಜಾನಪದ ಹಿನ್ನೆಲೆಯ ಪ್ರೇರಕ ಚಳವಳಿಗಳು
4. 1.
ಹರಿದಾಸ ಕಾವ್ಯ ಪರಂಪರೆ
4. 2.
ತತ್ತ್ವಪದ : ಜನಮುಖಿ ಕಾವ್ಯ
4. 3.
ಲಾವಣಿ ಕಾವ್ಯ ಶಕ್ತಿ
ಅಧ್ಯಾಯ 5
99-169
ನವೋದಯದ ನಾಲ್ಕು ಕೇಂದ್ರಗಳು : ಕಾವ್ಯ ಮತ್ತು ಜಾನಪದ ಹಿನ್ನೆಲೆ
5. 1.
ಹಿನ್ನೋಟ
5.1.1.
ಅನುಭಾವಿ ನೆಲೆ; ಜಾನಪದ ಪ್ರಭಾವ
5.1.2.
ಪಾಶ್ಚಿಮಾತ್ಯ ಕಾವ್ಯ ಮತ್ತು ಜಾನಪದದ ಹಿನ್ನೆಲೆ
5.1.3.
ಜಾನಪದ ತಳಹದಿಗೆ ಪೂರಕ ನೆಲೆ; ಉತ್ತರ ಕರ್ನಾಟಕ
5. 2.
ನವೋದಯ ಕಾವ್ಯ : ಮೈಸೂರು ಕೇಂದ್ರ
5.2.1.
ಇಂಗ್ಲೀಷ್ ಗೀತಗಳು : ಹಳೆಯ ಸಾಹಿತ್ಯದ ಮೌಲ್ಯ
5.2.2.
ಕುವೆಂಪು ಮತ್ತು ಜಾನಪದ ಅಬಿsವ್ಯಕ್ತಿ
5.2.3.
ಸಂಪ್ರದಾಯನಿಷ್ಟ ಶಿಷ್ಟತೆ
5.2.4.
ಭಾರತೀಯ ಪರಂಪರೆಯ ಆಕರ್ಷಣೆಯ ನೆಲೆ
5.2.5.
ನಗರಾಂಚಲ ಜಾನಪದ ಮತ್ತು ರತ್ನನ ಪದಗಳು
5. 3.
ನವೋದಯ ಕಾವ್ಯ : ಮಂಗಳೂರು ಕೇಂದ್ರ
5.3.1.
ಒಂದು ಬಿತ್ತಿ ನೂರು ಬೆಳೆ
5.3.2.
ಆಡುಮಾತು ಮತ್ತು ಕಾವ್ಯ ಭಾಷೆ
5.3.3.
ಕ್ರೈಸ್ತ ಮಿಷನರಿಗಳ ಕಾವ್ಯ
5.3.4.
ಯಕ್ಷಗಾನ ಮತ್ತು ಜೋಗುಳ ಪದಗಳು
5.3.5.
ಮಂಗಳೂರು ಮಿತ್ರ ಮಂಡಲಿ
5.4.
ನವೋದಯ ಕಾವ್ಯ : ಧಾರವಾಡ ಕೇಂದ್ರ
5.4.1.
ಜಾನಪದ ಹಿನ್ನೆಲೆಯ ಸತ್ವಯುತ ಕಾವ್ಯ
5.4.2.
ಗೆಳೆಯರ ಗುಂಪು; ಜಾನಪದ ಸೆಳೆತ
5.4.3.
ಶಾಂತ ಕವಿಗಳು; ಜಾನಪದದತ್ತ ತೋರಿದ ದಾರಿ
5.4.4.
ಖಾನೋಳಕರ; ಭಾವಗೀತೆಗೆ ಜಾನಪದದ ಸತ್ವ
5.4.5.
ಸಾಲಿ ಮತ್ತು ಇತರರ ಕಾವ್ಯ
5.5.
ನವೋದಯ ಕಾವ್ಯ : ಹಲಸಂಗಿ ಕೇಂದ್ರ
5.5.1.
ಜಾನಪದದ ಮಹತ್ವ
5.5.2.
ಹಲಸಂಗಿ ಗ್ರಾಮ; ಜಾನಪದ ಪರಿಸರ
5.5.3.
ನವೋದಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿ
5.5.4.
ಹಲಸಂಗಿ ಗೆಳೆಯರ ಗುಂಪು
5.5.5.
ಜನಪದ ಗೀತ ಸಂಪಾದನಾ ಕಾರ್ಯ
5.5.6.
ಗರತಿಯ ಹಾಡು
5.5.7.
ಜೀವನ ಸಂಗೀತ
5.5.8.
ಮಲ್ಲಿಗೆ ದಂಡೆ
5.5.9.
ಹಲಸಂಗಿ ಕೇಂದ್ರದ ಕವಿಗಳ ಕಾವ್ಯ
ಅಧ್ಯಾಯ 6
170-228
ನವೋದಯ ಕಾವ್ಯ : ಬೇಂದ್ರೆ, ಮಧುರಚೆನ್ನ, ಆನಂದಕಂದರ ಜಾನಪದ ಹಿನ್ನೆಲೆ, ವಸ್ತು ಆಕೃತಿಗಳ ವಿಶ್ಲೇಷಣೆ
6. 1.
ಬೇಂದ್ರೆಯವರ ಕಾವ್ಯ
6.1.1.
ಮುಕ್ತತೆ ತೋರಿದ ಜಾನಪದ
6.1.2.
ಗರತಿಯ ಹಾಡೆಂಬ ಜನಪದ ವೇದ
6.1.3.
ಅಂಬಿಕಾತನಯ ಕಟ್ಟಿದ ಕಗ್ಗಾ
6.2.4.
ತೊಳೆಯದ, ಬಾಚದ ಶಬ್ದಗಳ ಕಾವ್ಯಶಿಲ್ಪ
6. 2.
ಮಧುರಚೆನ್ನರ ಕಾವ್ಯ
6.2.1.
ಅನುಭಾವಿ ಕವಿಗಳ ಅಬಿsವ್ಯಕ್ತಿ ಮತ್ತು ಜಾನಪದ
6.2.2.
ನನ್ನ ನಲ್ಲ : ಜಾನಪದದ ಹೊಸ ಸಾಧ್ಯತೆ
6.2.3.
ನಿರಂತರ ಜಾನಪದ : ಮುಗಿಯದ ಹಾಡು
6.2.4.
ನವೋದಯ ಕಾವ್ಯ : ಜಾನಪದದ ನೆಲೆ
6. 3.
ಆನಂದಕಂದರ ಕಾವ್ಯ
6.3.1.
ಗ್ರಾಮ ಸಂಸ್ಕøತಿಯ ಜಾನಪದೀಯ ಹಿನ್ನೆಲೆ
6.3.2.
'ಹಳ್ಳಿಗರ ಹಾಡುಗಳು' ಮತ್ತು ಜಾನಪದ ಕಾಯಕ
6.3.3.
ಜನಪದ ಕಾವ್ಯ ಪರಿಸರದ ಪುನರ್‍ಸೃಷಿವಿ
6.3.4.
'ನಲ್ವಾಡುಗಳು' ಜಾನಪದದ ಸಮೃದ್ಧತೆ
6.4.
ನವೋದಯೋತ್ತರ ಕಾಲದ ನವೋದಯ ಕವಿಗಳು
ಅಧ್ಯಾಯ 7
229-239
ನವೋದಯ ಕಾವ್ಯ : ಭಾಷೆ, ಪದ, ನುಡಿಗಟ್ಟುಗಳ ಸ್ವೋಪಜ್ಞತೆ
7.1.
ಜನಪದ ಭಾಷೆ ಮತ್ತು ಶಿಷ್ಟ ಪ್ರಜ್ಞೆಯ ಎಚ್ಚರ
7.2.
ಆಡುಮಾತಿನ ಧಾಟಿ ಮತ್ತು ಸಂವಹನಶೀಲತೆ
7.3.
ವ್ಯಕ್ತಿನಿಷ್ಟ ಕೃತಿನಿಷ್ಟ ಸ್ವೋಪಜ್ಞತೆ
7.4.
ಪದ, ನುಡಿಗಟ್ಟುಗಳ ಕಾವ್ಯಾಬಿsವ್ಯಕ್ತಿಯ ವಿಶಿಷ್ಟತೆ
ಅಧ್ಯಾಯ 8
240-243
ಸಮಾರೋಪ
ಅನುಬಂಧಗಳು
244-266
1. ಜನಪದ ಅಂಶಗಳುಳ್ಳ ಮಾದರಿ ಕಾವ್ಯಭಾಗಗಳು
2. ಪರಾಮರ್ಶನ ಗ್ರಂಥಗಳು